ಮದುವೆಯಾದ ಎರಡು ವಾರಕ್ಕೆ ಭೀಕರ ಕಾರು ಅಪಘಾತದಲ್ಲಿ ಲಿವರ್ಪೂಲ್ ತಾರೆ ‘ಡಿಯೋಗೊ ಜೋಟಾ’ ನಿಧನರಾಗಿದ್ದಾರೆ.
ದುರಂತ ಘಟನೆಯೊಂದರಲ್ಲಿ, ಲಿವರ್ಪೂಲ್ ಫಾರ್ವರ್ಡ್ ಆಟಗಾರ ಡಿಯೋಗೊ ಜೋಟಾ ಅವರ ಮದುವೆಯಾದ ಎರಡು ವಾರಗಳ ನಂತರ ಸ್ಪೇನ್ನಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 28 ವರ್ಷ ಆಗಿತ್ತು.
ಸ್ಪ್ಯಾನಿಷ್ ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ, ಜೋಟಾ ಗುರುವಾರ ಮುಂಜಾನೆ ಕಾರಿನಲ್ಲಿ ತನ್ನ ಸಹೋದರ, ಫುಟ್ಬಾಲ್ ಆಟಗಾರ ಆಂಡ್ರೆ ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಝಮೋರಾ A-52 ಪ್ರಾಂತ್ಯದಲ್ಲಿ ಅಪಘಾತ ಸಂಭವಿಸಿದೆ. ಆಂಡ್ರೆ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಜೋಟೋವಾ ಇತ್ತೀಚೆಗೆ ತನ್ನ ಬಾಲ್ಯದ ಪ್ರಿಯತಮೆ ರೂಟ್ ಕಾರ್ಡೋಸೊ ಅವರನ್ನು ವಿವಾಹವಾಗಿದ್ದರು. ಆದರೆ ವಿಧಿ ಲಿಖಿತವೇ ಬೇರೆ ಆಗಿತ್ತು.
🥀https://t.co/CLNDQh7bwX pic.twitter.com/b6dbRnDNdw
— AmukMarugul (@AmukMaarugul) July 3, 2025
You Might Also Like
TAGGED:ಡಿಯೋಗೊ ಜೋಟಾ