ಪುಣೆ: ಕೊರಿಯರ್ ಕೊಡಲು ಬಂದಿದ್ದ ಯುವಕನೊಬ್ಬ ಹೇಯ ಕೃತ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಐಷಾರಾಮಿ ಫ್ಲಾಟ್ ನಲ್ಲಿ ವಾಸವಾಗಿದ್ದ ಯುವತಿ ಮೇಲೆ ಕೊರಿಯರ್ ಬಾಯ್ ಅತ್ಯಾಚಾರವೆಸಗಿ, ಸೆಲ್ಫಿ ವಿಡಿಯೋ ತೆಗೆದಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಕೊರಿಯರ್ ಕೊಡಲೆಂದು ಬಂದ ಆರೋಪಿ, ಯುವತಿಯ ಮುಖಕ್ಕೆ ಏನನ್ನೋ ಸ್ಪ್ರೇ ಮಾಡಿ, ಯುವತಿಯ ಪ್ರಜ್ಞೆ ತಪ್ಪಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಕೃತ್ಯದ ಬಳಿಕ ಆಕೆಯ ಮೊಬೈಲ್ ನಲ್ಲಿ ಸೆಲ್ಫಿ ತೆಗೆದು, ನಾನು ಮತ್ತೆ ಬರುತ್ತೇನೆ ಎಂದು ನೋಟ್ ಬರೆದಿಟ್ಟು ಹೋಗಿದ್ದಾನೆ.
ಘಟನೆ ಬಗ್ಗೆ ಪುಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗೆ ಐದು ತಂಡ ರಚಿಸಲಾಗಿದೆ. ಯುವತಿ ವಾಸಿಸುತ್ತಿದ್ದ ಫ್ಲ್ಯಾಟ್ ಗೆ ಡಿಲೆವರಿ ಬಾಯ್ ಒಬ್ಬ ಹೋಗಿರುವ ಬಗ್ಗೆ ಗೊತ್ತಾಗಿದೆ. ಯುವತಿಯ ಮೇಲೆ ಅತ್ಯಾಚಾರವೆಸಗಿ, ಆಕೆಯ ಮೊಬೈಲ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ನೋಟ್ ಬರೆದು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.