ಬೆಂಗಳೂರು : ಜಾತಿ ಸಮೀಕ್ಷೆ ವೇಳೆ ಬೇಕಾಬಿಟ್ಟಿ ಸ್ಟಿಕ್ಕರ್ ಅಂಟಿಸಿ, ಸಾರ್ವಜನಿಕರ ಜೊತೆ ಕಿರಿಕ್ ಮಾಡಿದ ಹಿನ್ನೆಲೆ ಮೂವರು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಬಿಬಿಎಂಪಿಯ ವಿವಿಧ ವಾರ್ಡ್ ನ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸೆಂದಿಲ್ ಕುಮಾರ್, ಕಂದಾಯ ವಸೂಲಿಗಾರ ಪೆದ್ದರಾಜು, ಬಿಎಎಂಪಿ ರೆವಿನ್ಯೂ ಇನ್ಪೆಕ್ಟರ್ ರಮೇಶ್ ಅಮಾನತು ಮಾಡಲಾಗಿದೆ,
ಜಾತಿಗಣತಿ ವೇಳೆ ಖಾಲಿ ಮನೆಗೂ ಸ್ಟಿಕರ್ ಅಂಟಿಸಿ ಬಿಬಿಎಂಪಿ ಸಿಬ್ಬಂದಿ ಕಳ್ಳಾಟವಾಡಿದ್ದು, ಜನಾಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರಿನ ಕೆಲವು ಮನೆಗಳಲ್ಲಿ ಮನೆಯ ಸದಸ್ಯರನ್ನ ಮಾತನಾಡಿಸದೇ ಅವರ ವಿವರಗಳನ್ನ ಪಡೆಯದೇ ಹಾಗೇ ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದೇ ರೀತಿ ಕೆಲವು ಖಾಲಿ ಮನೆಗೂ ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ನಿನ್ನೆ ಬೆಳಗ್ಗೆ ಬೆಂಗಳೂರಿನ ಸಾರ್ವಭೌಮ ನಗರದಲ್ಲಿ ನಂದೀಶ್ ಎಂಬುವವರ ಮೇಲೆ ಪಾಲಿಕೆ ಸಿಬ್ಬಂದಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಬಿಬಿಎಂಪಿ ಸಿಬ್ಬಂದಿಯ ಗೂಂಡಾ ವರ್ತನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆ ಮಾಲೀಕರ ಮಾಹಿತಿ ಪಡೆಯದೇ ಸ್ಟಿಕ್ಕರ್ ಅಂಟಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸಿಬ್ಬಂದಿಗಳು ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.
ಇದು ದಲಿತ ವಿರೋಧಿ @INCKarnataka ಸರ್ಕಾರದ ಢೋಂಗಿ ಸಮೀಕ್ಷೆ.
— Janata Dal Secular (@JanataDal_S) July 2, 2025
ಪರಿಶಿಷ್ಟರ ಉದ್ಧಾರ ಮಾಡುತ್ತೇವೆ ಎಂದು ಬೊಗಳೆ ಬಿಡುವ ಸಿಎಂ @siddaramaiah, ಡಿಸಿಎಂ @DKShivakumar ಅವರೇ,
ಮನೆ ಮಾಲಿಕರ/ವಾಸವಿರುವವರ ಬಳಿ ಮಾಹಿತಿಯನ್ನು ಪಡೆಯದೇ ಕದ್ದು ಮುಚ್ಚಿ ಮನೆಗಳಿಗೆ ಚೀಟಿ ಅಂಟಿಸುವುದು ಯಾವ ಮಾದರಿಯ ಸಮೀಕ್ಷೆ ?
ಲಂಚಗುಳಿತನ, ಭ್ರಷ್ಟಾಚಾರ,… pic.twitter.com/2ChHhXAvZH