ಚಿತ್ರದುರ್ಗ : ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ ಪೋಕ್ಸೋ ಕೇಸ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಇಂದು ಕೋರ್ಟ್ ನಲ್ಲಿ ಮುರುಘಾಶ್ರೀ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ.
ಚಿತ್ರದುರ್ಗದ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೂರ್ತಿ ಮುರುಘಾ ಶರಣರ ಹೇಳಿಕೆಗೆ ಇಂದು (ಜುಲೈ 3) ದಿನಾಂಕ ನಿಗದಿಪಡಿಸಿದೆ. ಮುರುಘಾಶ್ರೀಗೆ ಶ್ರವಣದೋಷ ಹಿನ್ನೆಲೆಯಲ್ಲಿ ವಿಸಿ ಬದಲು ಖುದ್ದಾಗಿ ಬರಲು ಕೋರ್ಟ್ ಆದೇಶಿಸಿದೆ . ವಿಡಿಯೋ ಕಾನ್ಸ್ಪರೆನ್ಸ್ ಬದಲು ಖುದ್ದಾಗಿ ಹಾಜರಾಗಿ ಹೇಳಿಕೆ ದಾಖಲಿಸಲು ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಈ ಹಿಂದೆ ಮುರುಘಾಶ್ರೀಗೆ ಹೈಕೋರ್ಟ್ ಜಾಮೀನು ನೀಡಿತ್ತು, ಆದರೆ ಸಾಕ್ಷಿಗಳ ವಿಚಾರಣೆ ನಡೆಯುವವರೆಗೂ ಬಂಧನದಲ್ಲಿಡಲು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ನಂತರ ಮುರುಘಾಶ್ರೀ ಬಿಡುಗಡೆಗೆ ಚಿತ್ರದುರ್ಗದ 2 ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶ ಹೊರಡಿಸಿತ್ತು.
You Might Also Like
TAGGED:ಪೋಕ್ಸೋ ಕೇಸ್