ನವದೆಹಲಿ: ಪ್ರತಿ ಭಾರತೀಯನ ಮೇಲೆ 4.8 ಲಕ್ಷ ರೂಪಾಯಿ ಸಾಲದ ಹೊರೆ ಇದೆ. ಎರಡು ವರ್ಷದ ಹಿಂದೆ ದೇಶದ ಪ್ರತಿ ಪಜೆ ಮೇಲೆ 3.9 ಲಕ್ಷ ರೂಪಾಯಿ ಸಾಲ ಇತ್ತು. ಇದೀಗ ಅದು 90,000 ರೂ.ನಷ್ಟು ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ವಿತ್ತೀಯ ಸ್ಥಿರತೆ ವರದಿ ತಿಳಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಭಾರತದ ಪ್ರತಿ ವ್ಯಕ್ತಿ ಮೇಲಿನ ಋಣಭಾರ 4.8 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. 2023ರ ಮಾರ್ಚ್ ನಲ್ಲಿ ಪ್ರತಿ ವ್ಯಕ್ತಿಯ ಮೇಲೆ 3.9 ಲಕ್ಷ ರೂಪಾಯಿ ಸಾಲವಿತ್ತು. ಎರಡು ವರ್ಷ ಅಂದರೆ ಮಾರ್ಚ್ 2025ರ ವೇಳೆಗೆ ಇದು ಶೇಕಡ 23 ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.
ಭಾರತೀಯನ ಮೇಲಿನ ಸಾಲದ ಹೊರೆ ಕಳೆದ ಎರಡು ವರ್ಷಗಳಲ್ಲಿ 90 ಸಾವಿರ ರೂಪಾಯಿಯಸ್ಟು ಹೆಚ್ಚಾಗಿದೆ. ಗೃಹ ಸಾಲ, ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ವೆಚ್ಚ, ಇತರೆ ರಿಟೇಲ್ ಲೋನ್ಸ್ ನಿಂದಾಗಿ ಸಾಲದ ಹೊರೆ ಏರಿಕೆ ಕಂಡಿದೆ. ಗೃಹೇತರ ರಿಟೇಲ್ ಲೋನ್ ನಂತಹ ಪರ್ಸನಲ್ ಲೋನ್ ಮತ್ತು ಕ್ರೆಡಿಟ್ ಲೋನ್ ನಲ್ಲಿಯೂ ಭಾರಿ ಏರಿಕೆಯಾಗಿದೆ. ಈ ಸಾಲ ಒಟ್ಟಾರೆ ದೇಶಿಯ ಸಾಲದ ಶೇಕಡ 54.9ರಷ್ಟು ಇದೆ. ಗೃಹ ಸಾಲದ ಪ್ರಮಾಣ ಶೇಕಡ 29 ರಷ್ಟು ಇದೆ.