ಮಗು ತೆಗೆಸಿಬಿಡಿ ಎಂದಿದ್ದ ಸಮುದಾಯ ನಾಯಕರು: ಬಿಜೆಪಿ ಮುಖಂಡನ ಪುತ್ರನಿಂದ ಲವ್, ಸೆಕ್ಸ್, ದೋಖಾ ಕೇಸ್ ಸಂತ್ರಸ್ತೆ ತಾಯಿ ಆಕ್ರೋಶ

ಮಂಗಳೂರು: ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ಲವ್, ಸೆಕ್ಸ್, ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಡಿ.ಪಿಐ. ಸಂಘಟನೆ ಪ್ರತಿಭಟನೆಯಲ್ಲಿ ಸಂತ್ರಸ್ತೆಯ ತಾಯಿ ಭಾಗಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ನಗರಸಭೆಯ ಎದುರು ಎಸ್‌ಡಿಪಿಐ ವತಿಯಿಂದ ಧರಣಿ ನಡೆಸಲಾಗಿದೆ. ಹಿಂದೂ ಪರ ಸಂಘಟನೆಗಳ ನಾಯಕರ ವಿರುದ್ಧ ಸಂತ್ರಸ್ತೆಯ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಸಂಘಟನೆ ನಾಯಕರು ಸೇರಿ ಎಲ್ಲಾ ಸಮುದಾಯದ ಬಳಿಗೆ ಹೋಗಿದ್ದೆ. ಎಲ್ಲಾ ಸಮುದಾಯಗಳ ನಾಯಕರು ಮಗು ತೆಗೆಸಿ ಬಿಡಿ ಎಂದು ಹೇಳಿದ್ದರು. ಬಿಜೆಪಿ ಮುಖಂಡನ ಜೊತೆಗೆ ಮದುವೆ ಮಾಡಿಸಿ ಎಂದು ಯಾರೂ ಹೇಳಲಿಲ್ಲ ಎಂದು ತಿಳಿಸಿದ್ದಾರೆ.

ಆರೋಪಿಯ ತಂದೆಯ ಜೊತೆಗೆ ಮಾತನಾಡಿದಾಗ ಮದುವೆ ಮಾಡಿಸುವೆ ಎಂದು ಹೇಳಿದ್ದರು. ನಿಮ್ಮ ಮಗಳು ಬೇರೆಯಲ್ಲ, ನನ್ನ ಮಗ ಬೇರೆಯಲ್ಲ, ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದರು. ಇದೀಗ ಆ ಹುಡುಗನನ್ನು ಅವರೇ ಅಡಗಿಸಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮಗಳಿಗೆ ನ್ಯಾಯಕ್ಕಾಗಿ ಬೇಕಾದ ಸಂಘಟನೆ ಅವರಿಗೆ ಕೇಳಿಕೊಂಡಿದ್ದೇನೆ. ನನ್ನ ಮಗಳ ಮಗುವಿಗೆ ಬಿಜೆಪಿ ಮುಖಂಡನ ಮಗ ತಂದೆಯ ಸ್ಥಾನ ನೀಡಬೇಕು. ನನ್ನ ಮಗಳು ತಾಯಿಯಾಗುವುದಕ್ಕೆ ಕಾರಣನಾದವನು ಮದುವೆಯಾಗಬೇಕು. ಆ ಹುಡುಗನ ಜೊತೆ ರಿಜಿಸ್ಟರ್ ಮದುವೆ ಆಗಬೇಕೆಂದು ಸಂತ್ರಸ್ತೆಯ ತಾಯಿ ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read