ಹಾಸನ: ನವವಿವಾಹಿತೆಯೊಬ್ಬರ ಶವ ರೈಲ್ವೆ ಹಳಿ ಮೇಲೆ ಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ವಿದ್ಯಾ ಮೃತ ಮಹಿಳೆ. ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಮೂಲದ ವಿದ್ಯಾ 6 ತಿಂಗಳ ಹಿಂದಷ್ಟೇ ಸೋಮಲಾಪುರ ಗ್ರಾಮದ ಶಿವು ಎಂಬಾತನ ಜೊತೆ ವಿವಾಹವಾಗಿದ್ದರು. ಶಿವು ಬೆಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಪತಿ-ಪತ್ನಿ ಇಬ್ಬರೂ ಬೆಂಗಳೂರಿನ ಶಂಕರಪುರಂ ನಲ್ಲಿ ವಾಸವಾಗಿದ್ದರು.
ಎರಡು ದಿನಗಳಿಂದ ನಾಪತ್ತೆಯಾಗಿದ್ದ ವಿದ್ಯಾ ಇಂದು ಅರಸೀಕೆರೆ ರೈಲ್ವೆ ಟ್ರ್ಯಾಕ್ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಮದುವೆಯಾದಾಗಿನಿಂದಲೂ ಪತಿ ಹಾಗೂ ಮನೆಯವರು ಕಿರುಕುಳ ನೀಡುತ್ತಿದ್ದರು. ಈಗ ಅವರೇ ವಿದ್ಯಾಳನ್ನು ಹತ್ಯೆ ಮಾಡಿದ್ದಾರೆ ಎಂದು ವಿದ್ಯಾ ಪೋಷಕರು ಆರೋಪಿಸಿದ್ದಾರೆ.
ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.