ಶ್ರೀನಗರ: ಪವಿತ್ರ ಅಮರನಾಥ ಯಾತ್ರೆಯ ಮೊದಲ ಶಿಬಿರಕ್ಕೆ ಇಂದು ಚಾಲನೆ ದೊರೆತಿದೆ. ನಾಳೆ ಜುಲೈ ೩ರಿಂದ ಅಧಿಕೃತವಾಗಿ ಯಾತ್ರೆ ಆರಂಭವಾಗಲಿದೆ. ಈ ನಡುವೆ ನಕಲಿ ನೋಂದಣಿ ಕಾರ್ಡ್ ಬಳಸಿ ಅಮರನಾಥ ಯಾತ್ರೆಗೆ ತೆರಳು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಹರಿಯಾಣ ಮೂಲದ ಜಗದ್ರಿಯ ದ್ವಾರಕಾ ಪುರಿ ನಿವಾಸಿ ಶಿವಂ ಮಿತ್ತಲ್ ಬಂಧಿತ ಆರೋಪಿ. ನಕಲಿ ನೋಂದಣಿ ಕಾರ್ಡ್ ಮೂಲಕ ಅಮರನಾಥ ಯಾತ್ರೆಗೆ ಪ್ರವೇಶ ಪಡೆಯಲು ಈತ ಯತ್ನಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.
ಈ ಬಾರಿ ಅಮರನಾಥ ಯಾತ್ರಾರ್ಥಿಗಳ ಪ್ರವೇಶಕ್ಕೆ ಮುಖ ಪರಿಚಯ ವ್ಯವಸ್ಥೆ ಮಾಡಲಾಗಿದೆ. ಶಿವಂ ಮಿತ್ತಲ್ ಭದ್ರತಾ ಚೆಕ್ ಪೋಸ್ಟ್ ಗಳಲ್ಲಿ ಅಕ್ರಮವಾಗಿ ಸಾಗುವಾಗ ಸಿಕ್ಕಿಬಿದ್ದಿದ್ದಾನೆ. ನಕಲಿ ಯಾತ್ರಾ ಕಾರ್ಡ್ ನನ್ನು ಪಡೆದು ಅಕ್ರಮವಾಗಿ ಯಾತ್ರೆಗೆ ಪ್ರವೇಶ ಪಡೆಯುವ ಮೂಲಕ ಭದ್ರತಾ ಸಿಬ್ಬಂದಿಯ ದಾರಿ ತಪ್ಪಿಸಲು ಯತ್ನಿಸಿದ್ದಾನೆ. ಕಡ್ದಾಯ ಭದ್ರತಾ ಪರಿಶೀಲನೆ ಪ್ರಕ್ರಿಯೆಯನ್ನು ಕಾನೂನುಬಾಹಿರವಾಗಿ ತಪ್ಪಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸೋನ್ಮಾರ್ಗ್ ಪೊಲೀಸರು ಶಿವಂ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.