ರಾಮನಗರ: ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಹುಭಾಷಾ ನಟ ಕಮಲ್ ಹಾಸನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ ಗೌಡ ಎಂಬುವವರು, ಕಮಲ್ ಹಾಸನ್ ವಿರುದ್ಧ ಕನಕಪುರ ಎರಡನೇ ಅಪರ ಸಿವಿಲ್ ಹಾಗೂ ಜೆ ಎಂ ಎಫ್ ಸಿ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದಾರೆ.
ಕಮಲ್ ಹಾಸನ್ ಕನ್ನಡದ ಬಗ್ಗೆ ಅವಹೇಳನ ಮಾಡಿರುವುದು ವೈಯಕ್ತಿಕವಾಗಿ ನೋವು ತಂದಿದೆ. ಜೊತೆಗೆ ಮಾನಸಿಕವಾಗಿ ಖಿನ್ನತೆಯನ್ನು ತರಿಸಿದೆ. ಕನ್ನಡಕ್ಕೆ ಅವಮಾನ ಮಾಡಿ ಕ್ಷಮೆ ಕೇಳದೇ ಉದ್ಧಟತನ ತೋರಿದ್ದಾರೆ ಎಂದು ದೂರು ನೀಡಿರುವ ನಾಗಾರ್ಜುನ್, ಪ್ರಕರಣದ ಬಗ್ಗೆ ಸಾಕ್ಷಿಯಾಗಿ ನಟ ಶಿವರಾಜ್ ಕುಮಾರ್ ಅವರನ್ನು ಪರಿಗಣಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿದೆ.