BIG NEWS: ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಥಳಿತ ಪ್ರಕರಣ: PSI ಸಸ್ಪೆಂಡ್

ಬೆಳಗಾವಿ: ಗೋ ರಕ್ಷಣೆ ಮಾಡಿದ್ದ ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದಲ್ಲಿ ಪಿಎಸ್ ಐ ಓರ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಠಾಣೆ ಪಿಎಸ್ ಐ ನಿಖಿಲ್ ಕಾಂಬಳೆ ಸಸ್ಪೆಂಡ್ ಆದವರು. ಜೂನ್ 26ರಂದು ಕಿಡಿಗೇಡಿಗಳು ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಶ್ರೀರಾಮಸೇನೆ ಕಾಅರ್ಯಕರ್ತರು ವಾಹನವನ್ನು ತಡೆದು ಗೋವುಗಳನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆತಂದು ದೂರು ನೀಡಿದ್ದರು. ಆದರೆ ಪಿಎಸ್ ಐ ನಿಖಿಲ್ ಕಾಂಬಳೆ ದೂರು ದಾಖಲಿಸಿಕೊಳ್ಳದೇ, ಮೇಲಾಧಿಕಾರಿಗಳಿಗೆ ಮಾಹಿತಿಯನ್ನೂ ನೀಡದೇ ಬಿಟ್ಟು ಕಳುಹಿಸಿದ್ದರು.

ಈ ವೇಳೆ ಗಡಿಪಾರಾದ ರೌಡಿಶೀಟರ್ ಶ್ರೀರಾಮಸೇನೆ ಕಾರ್ಯಕರ್ತ ಮಹಾಪುರ ಸೊಲ್ಲಪುರೆ ಕೂಡ ಕಾರ್ಯಕರ್ತರೊಂದಿಗೆ ಇದ್ದರೂ ಆತನನ್ನು ಪಿಎಸ್ ಐ ಬಿಟ್ತು ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಎಸ್ ಪಿ, ಪಿಎಸ್ ಕಾಂಬಳೆ ಅವರನ್ನು ಕರ್ತವ್ಯಲೋಪ ಆರೋಪದಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read