ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತ ಹೆಚ್ಚಳವಾಗುತ್ತಿದ್ದು, ನಿನ್ನೆ ಒಂದೇ ದಿನ ರಾಜ್ಯದಲ್ಲಿ 6 ಮಂದಿ ಬಲಿಯಾಗಿದ್ದಾರೆ.
ಹಾಸನದ ಕೊಮ್ಮೇನಹಳ್ಳಿಯ ಬಾಣಂತಿ ಹರ್ಷಿತಾ, ಹೊಳೆನರಸೀಪುರದ ಸಂಜಯ್, ಬೇಲೂರು ತಾಲೂಕಿನ ರವಿಕುಮಾರ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಶಿವಮೊಗ್ಗದಲ್ಲಿ ವೈದ್ಯ, ಚಿಕ್ಕಮಗಳೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಶಿವಮೊಗ್ಗದಲ್ಲಿ ‘ಹಾರ್ಟ್ ಅಟ್ಯಾಕ್’ ಗೆ ವೈದ್ಯ ಬಲಿ
ಮೃತರನ್ನು ಸರ್ಕಾರಿ ವೈದ್ಯ ಸಂದೀಪ್ (48 ) ಎಂದು ಗುರುತಿಸಲಾಗಿದೆ. ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಸಂದೀಪ್ ಮೃತಪಟ್ಟಿದ್ದಾರೆ. ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಕಳೆದ 8 ವರ್ಷಗಳಿಂದ ಇವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಒಂದೂವರೆ ತಿಂಗಳ ಬಾಣಂತಿ ಬಲಿ
ಬಾಣಂತನಕ್ಕೆಂದು ಹಾಸನದಿಂದ ಶಿವಮೊಗ್ಗದ ಆಯನೂರಿಗೆ ಹರ್ಷಿತಾ(22) ಎಂಬ ಮಹಿಳೆ ಹೋಗಿದ್ದರು. ಆದರೆ ತವರು ಮನೆಯಲ್ಲೇ ಹರ್ಷಿತಾಗೆ ಹೃದಯಾಘಾತ ಸಂಭವಿಸಿದೆ. ಹಾಸನದ ಕೊಮ್ಮೆನಹಳ್ಳಿಯ ಹರ್ಷಿತಾ ಶಿವಮೊಗ್ಗದ ಆಯನೂರು ಗ್ರಾಮದಲ್ಲಿ ಮೃತಪಟ್ಟಿದ್ದಾರೆ. ಹರ್ಷಿತಾಗೆ ಎದೆನೋವು ಕಾಣಿಸಿಕೊಂಡಿತ್ತು, ಕೂಡಲೇ ಹಾಸನದ ಕೊಮ್ಮೇನಹಳ್ಳಿಯಲ್ಲಿರುವ ತಮ್ಮ ಪತಿಗೆ ಕರೆ ಮಾಡಿ ಬರಲು ಹೇಳಿದ್ದಾರೆ . ಆದರೆ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬುಲೆನ್ಸ್ ನಲ್ಲೇ ಅವರು ಮೃತಪಟ್ಟಿದ್ದಾರೆ. ಹಾಸನದಲ್ಲಿ ಸರಣಿ ಹೃದಯಾಘಾತ ಸಂಭವಿಸುತ್ತಿದ್ದು, ಆತಂಕ ಮನೆ ಮಾಡಿದೆ.
ಬೆಳ್ತಂಗಡಿಯಲ್ಲಿ ಹಾರ್ಟ್ ಅಟ್ಯಾಕ್ ನಿಂದ ವ್ಯಕ್ತಿ ಸಾವು!
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಪದಕೋಡಿಯ ವಜ್ರಾಕ್ಷ ಪೂಜಾರಿ (53) ಎನ್ನುವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ವಜ್ರಾಕ್ಷ ಪೂಜಾರಿ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಜಿರೆಯ ಖಾಸಗಿ ಆಸ್ಪತ್ರೆಗೆ ವಜ್ರಾಕ್ಷ ಪೂಜಾರಿ ದಾಖಲಾಗಿದ್ದರು ಆಸ್ಪತ್ರೆಯಲ್ಲಿ ವಜ್ರಾಕ್ಷಾ ಪೂಜಾರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮಾತ್ರೆ ಸೇವಿಸುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು!
ಮೆಡಿಕಲ್ ನಲ್ಲಿ ಮಾತ್ರೆ ಖರೀದಿಸುವಾಗಲೇ ವ್ಯಕ್ತಿಯೊಬ್ಬರು ಕುಸಿದುಬಿದ್ದು ಮೃತಪಟ್ಟಿದ್ದಾರೆ. . ಮೃತರನ್ನು ಕೋಟೆ ಬಡಾವಣೆಯ ವಿಶ್ವನಾಥ್ (50) ಎಂದು ಗುರುತಿಸಲಾಗಿದೆ. ವಿಶ್ವನಾಥ್ ಅವರು ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತುಮಕೂರಿನಲ್ಲಿ ಬಿಜೆಪಿಯ ಯುವ ಮುಖಂಡ ಸಾವು
ತುಮಕೂರಿನಲ್ಲಿ ಬಿಜೆಪಿಯ ಯುವ ಮುಖಂಡ ನೀಲಕಂಠ ಸ್ವಾಮಿ (36) ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.