ಬೆಂಗಳೂರು : ‘’ನನ್ನ ಕಾಲ್ಗುಣ ಸರಿಯಿಲ್ಲ’’ ಎಂದು ಮೌಢ್ಯ ಬಿತ್ತುತ್ತಿದ್ದ ಮೂಢಾತ್ಮರಿಗೆ ಪ್ರಕೃತಿ ಮಾತೆಯೇ ತಾಪರಾಕಿ ಬಾರಿಸಿದ್ದಾಳೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ “ನನ್ನ ಕಾಲ್ಗುಣ ಸರಿಯಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ರೆ ಬರ ಬರುತ್ತೆ” ಎಂದು ಮೌಢ್ಯ ಬಿತ್ತುತ್ತಿದ್ದ ಮೂಢಾತ್ಮರಿಗೆ ಪ್ರಕೃತಿ ಮಾತೆಯೇ ತಾಪರಾಕಿ ಬಾರಿಸಿದ್ದಾಳೆ. 92 ವರ್ಷಗಳ ನಂತರ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಕೆಆರ್ಎಸ್ ಜಲಾಶಯ ಭರ್ತಿಯಾಗಿದ್ದು, ಹೊಸ ದಾಖಲೆ ಬರೆದಿದೆ. ಕಾಲ್ಗುಣ, ಕೈಗುಣಗಳೆಲ್ಲ ಆತ್ಮವಂಚನೆಯ ಮಾತುಗಳಷ್ಟೆ, ಪ್ರಕೃತಿಯ ಮುಂದೆ ಎಲ್ಲವೂ ನಗಣ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ವಿಶ್ವಾಸ ಸರಿ ಇಲ್ಲ ಎಂದು ಬುರುಡೆ ಬಿಡುತ್ತಿದ್ದಾರೆ. ನಾನು ಮತ್ತು ಶಿವಕುಮಾರ್ ಇಬ್ಬರೂ ಒಟ್ಟಾಗಿ, ಗಟ್ಟಿಯಾಗಿದ್ದೀವಿ. ನಮ್ಮ ಸರ್ಕಾರವೂ ಐದು ವರ್ಷ ಗ್ಯಾರಂಟಿಯಾಗಿ ಗಟ್ಟಿಯಾಗಿ ಇರುತ್ತದೆ. 2028 ರಲ್ಲೂ ಗೆದ್ದು ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ.
ನಮ್ಮ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹಣ ಸಾಮರ್ಥ್ಯ ಮೀರಿ ಕಳೆದೆರೆಡು ವರ್ಷಗಳಿಂದ ತಮಿಳುನಾಡಿಗೆ ಅವರ ಪಾಲಿನ ನೀರು ಬಿಟ್ಟು ಹೆಚ್ಚುವರಿಯಾಗಿ ಕಾವೇರಿ ನೀರು ಹರಿದು ಹೋಗುತ್ತಿದೆ. ರಾಜ್ಯದ ಪಾಲಿನ ಒಂದು ಹನಿ ನೀರು ಕೂಡ ವ್ಯರ್ಥವಾಗಬಾರದು ಎಂಬುದು ನಮ್ಮ ಆಶಯ. ಈ ಉದ್ದೇಶದಿಂದಲೇ ಮೇಕೆದಾಟು ಅಣೆಕಟ್ಟನ್ನು ಕಟ್ಟಬೇಕೆಂದು ನಾವು ಹೇಳಿದ್ದು ಎಂದು ಅವರು ಹೇಳಿದ್ದಾರೆ.
"ನನ್ನ ಕಾಲ್ಗುಣ ಸರಿಯಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ರೆ ಬರ ಬರುತ್ತೆ" ಎಂದು ಮೌಢ್ಯ ಬಿತ್ತುತ್ತಿದ್ದ ಮೂಢಾತ್ಮರಿಗೆ ಪ್ರಕೃತಿ ಮಾತೆಯೇ ತಾಪರಾಕಿ ಬಾರಿಸಿದ್ದಾಳೆ.
— Siddaramaiah (@siddaramaiah) July 1, 2025
92 ವರ್ಷಗಳ ನಂತರ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಕೆಆರ್ಎಸ್ ಜಲಾಶಯ ಭರ್ತಿಯಾಗಿದ್ದು, ಹೊಸ ದಾಖಲೆ ಬರೆದಿದೆ.
ಕಾಲ್ಗುಣ, ಕೈಗುಣಗಳೆಲ್ಲ ಆತ್ಮವಂಚನೆಯ… pic.twitter.com/1yi4LMaq5G