ಮಧ್ಯಪ್ರದೇಶ : ಪಾಗಲ್ ಪ್ರೇಮಿಯೋರ್ವ ಪ್ರೇಯಸಿಯನ್ನೇ ಕತ್ತು ಹಿಸುಕಿ ಕೊಂದು ಶವದ ಜೊತೆ 2 ದಿನ ಮಲಗಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನ ಗಾಯಿತ್ರಿ ನಗರದಲ್ಲಿ ನಡೆದಿದೆ.ಅಕ್ರಮ ಸಂಬಂಧದ ಶಂಕೆ ಹಿನ್ನೆಲೆ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.
ಮೃತ ಯುವತಿಯನ್ನು ರಿತಿಕಾ ಸೇನ್ (29) ಎಂದು ಗುರುತಿಸಲಾಗಿದೆ. ಸಚಿನ್ ರಜಪೂತ್ ಮತ್ತು 29 ವರ್ಷದ ರಿತಿಕಾ ಸೇನ್ ಮೂರು ವರ್ಷಗಳಿಗೂ ಹೆಚ್ಚು ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಜೂನ್ 27 ರ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದ್ದು, ಮತ್ತು ಸಚಿನ್ ರಿತಿಕಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಅವನು ಆಕೆಯ ದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿ, ಹಗ್ಗದಿಂದ ಕಟ್ಟಿ ಹೋಗಿದ್ದಾನೆ. ನಂತರ ಏನೂ ಮಾಡಬೇಕೆಂದು ತಿಳಿಯದೇ ಅದರ ಜೊತೆ 2 ದಿನ ಮಲಗಿದ್ದಾನೆ.
ಕೊಲೆಯ ನಂತರ ಸಚಿನ್ ಒಬ್ಬ ಸ್ನೇಹಿತನನ್ನು ಭೇಟಿಯಾದನು ಮತ್ತು ಇಬ್ಬರೂ ಒಟ್ಟಿಗೆ ಮದ್ಯ ಸೇವಿಸಿದರು. ಎಣ್ಣೆ ಏಟಲ್ಲಿ ಆರೋಪಿ ತಾನು ಮಾಡಿದ ಕೃತ್ಯ ಒಪ್ಪಿಕೊಂಡಿದ್ದಾನೆ. ಆದರೆ ಸ್ನೇಹಿತ ಕುಡಿದು ಏನೇನೋ ಮಾತನಾಡಬೇಡ ಎಂದು ಹೇಳಿದ್ದಾನೆ. ಮರುದಿನ ಸ್ನೇಹಿತನಿಗೆ ಕಾಲ್ ಮಾಡಿ ಅದೇ ವಿಷಯ ಹೇಳಿದಾಗ ಅನುಮಾನಗೊಂಡ ಸ್ನೇಹಿತ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾನೆ. ನಂತರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ರಿತಿಕಾ ಶವ ಪತ್ತೆಯಾಗಿದೆ. ಸಚಿನ್ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.