ಬೆಂಗಳೂರು : ರಾಜಕಾರಣಿಗಳು, ಸಹಚರರ ಜೊತೆ ಮಲಗುವಂತೆ ಒತ್ತಾಯಿಸಿ ಸೈಕೋ ರೀತಿ ವರ್ತಿಸಿದ ಪತಿ ವರ್ತನೆಗೆ ಬೇಸತ್ತು ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪತಿ ಯೂನಿಸ್ ಪಾಷಾ ವಿರುದ್ಧ ಪತ್ನಿ ಹಲೀಮ್ ಸಾದಿಯಾ ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ. ಪತಿ ಹಾಗೂ ಅತ್ತೆ ಮಾವನ ವಿರುದ್ಧ ಕೂಡ ಮಹಿಳೆ ಗಂಭೀರ ಆರೋಪ ಮಾಡಿದ್ದಾಳೆ.
ನನ್ನ ಪತಿ ರಾಜಕಾರಣಿಗಳು ಹಾಗೂ ಸಹಚರರ ಜೊತೆ ಮಲಗುವಂತೆ ಒತ್ತಾಯಿಸುತ್ತಾರೆ. ಅಲ್ಲದೇ ಬಲವಂತವಾಗಿ ಗರ್ಭಪಾತ ಕೂಡ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಒಪ್ಪದಿದ್ದಕ್ಕೆ 6 ಬಾರಿ ತಲಾಖ್ ನೀಡಿದ್ದಾರೆ. ಅತ್ತೆ-ಮಾವ ಕೂಡ ನನಗೆ ಕಿರುಕುಳ ನೀಡಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಹಲೀಮ್ ಸಾದಿಯಾ ಬನಶಂಕರಿ ಠಾಣೆಗೆ ದೂರು ನೀಡಿದ್ದಾರೆ.
ಅಲ್ಲದೇ ಮಸಾಜ್ ಮಾಡುವಂತೆ ಕೂಡ ಮಾವ ಕೇಳುತ್ತಾನೆ. ನನಗೆ ಪತಿ ಹಾಗೂ ಆತನ ಕುಟುಂಬದವರಿಂದ ನಿರಂತರ ಕಿರುಕುಳವಾಗುತ್ತಿದೆ ಎಂದು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಯೂನಿಸ್ ಹಾಗೂ ಆತನ ತಂದೆ-ತಾಯಿ ವಿರುದ್ಧ ಬನಶಂಕರಿ ಠಾಣೆಯಲ್ಲಿ ಎಫ್ ಐ ಆರ್ (FIR) ದಾಖಲಾಗಿದೆ.