HomeLive NewsBIG NEWS: ಶಾಸಕರ ಸಭೆ ಕರೆದ ಉದ್ದೇಶ ಅವರನ್ನೇ ಕೇಳಬೇಕು ಎಂದ ಸಚಿವ ಸತೀಶ್ ಜಾರಕಿಹೊಳಿ

BIG NEWS: ಶಾಸಕರ ಸಭೆ ಕರೆದ ಉದ್ದೇಶ ಅವರನ್ನೇ ಕೇಳಬೇಕು ಎಂದ ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ಸ್ವಪಕ್ಷ ಶಾಸಕರಿಂದಲೇ ಸರ್ಕಾರದ ವಿರುದ್ಧ ಅಸಮಾಧಾನ, ಇಲಾಖೆಗಳ ಬಗ್ಗೆ ಆರೋಪ, ಸಿಎಂ ಬದಲಾವಣೆ ವಿಚಾರವಾಗಿ ಚರ್ಚೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿದ್ದು, ಶಾಸಕರ ಜೊತೆ ಖುದ್ದು ಮಾತುಕತೆ ನಡೆಸಲಿದ್ದಾರೆ.

ಸುರ್ಜೇವಾಲ ಶಾಸಕರ ಸಭೆ ಕರೆದ ವಿಚಾರವಾಗಿ ಸುದ್ದಿಗರರೊಂದಿಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಶಾಸಕರ ಸಭೆ ಕರೆದ ಉದ್ದೇಶದ ಬಗ್ಗೆ ಅವರನ್ನೇ ಕೇಳಬೇಕು ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಮಸ್ಯೆ ಏನಾದರೂ ಇದೆಯೇ? ಯಾಕೆ ಪದೇ ಪದೇ ಸರ್ಕಾರದ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಕೇಳುತ್ತಾರೆ. ಏನೇ ಸಮಸ್ಯೆಗಳಿದ್ದರೂ ನೇರವಾಗಿ ನನ್ನ ಬಳಿ ಹೇಳಿ ಎನ್ನುತ್ತಾರೆ. ಶಾಸಕರ ಜೊತೆ ಚರ್ಚೆ ನಡೆಸುತ್ತಾರೆ. ಪಕ್ಷ ಸಂಘಟನೆ ವಿಚಾರವಾಗಿ ಸಮಾಲೋಚನೆ ನಡೆಸುತ್ತಾರೆ ಎಂದರು.

ಶಾಸಕ ರಾಜು ಕಾಗೆ ನಾಳೆ ಸುರ್ಜೇವಲಾ ಅವರನ್ನು ಭೇಟಿಯಾಗುತ್ತಾರೆ. ಸುರ್ಜೇವಾಲ ಇನ್ನೂ ಎರಡು ದಿನಗಳ ಕಾಲ ರಾಜ್ಯದಲ್ಲಿ ಇರುತ್ತಾರೆ. ಸುರ್ಜೇವಾಲ ನನನ್ನು ಕರೆದಿಲ್ಲ, ಹಾಗಾಗಿ ನಾನು ಭೇಟಿಯಾಗುತ್ತಿಲ್ಲ. ಅವಶ್ಯಕತೆ ಇದ್ದರೆ ನೋಡೋಣ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular