HomeLatest NewsBIG NEWS: ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರ ದಿಢೀರ್ ದಾಳಿ: 12 ಆರೋಪಿಗಳು ಅರೆಸ್ಟ್

BIG NEWS: ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರ ದಿಢೀರ್ ದಾಳಿ: 12 ಆರೋಪಿಗಳು ಅರೆಸ್ಟ್

ಬೆಳಗಾವಿ: ಜಮೀನಿನಲ್ಲಿ ಅಕ್ರವಾಗಿ ಜೂಜಾಟ ನಡೆಸುತ್ತಿದ್ದವರ ಮೇಲೆ ಬೆಳಗಾವಿ ಪೊಲೀಸರು ದಿಢೀರ್ ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

ನಂದಿಹಳ್ಳಿ ಗ್ರಾಮ ವ್ಯಾಪ್ತಿ ವಾಕಡೆವಾಡಿ ರಸ್ತೆಯಲ್ಲಿರುವ ರವಿ ತೋಪಕರ ಎಂಬುವವರ ಜಮೀನಿನಲ್ಲಿ ಕಿಡಿಗೇದಿಗಳು ಇಸ್ಪೀಟ್ ಎಲೆಗಳ ಮೇಲೆ ಹಣ ಕಟ್ಟಿ ಅಂದರ್-
ಬಾಹರ್ ಜೂಜಾಟ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆಯ ಪಿಎಸ್ ಐ ಸಂತೋಷ ದಳವಾಯಿ ನೇತೃತ್ವದಲ್ಲಿ ದಾಲಿ ನಡೆಸಲಾಗಿದ್ದು, 12 ಆರೋಪಿಗಳನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂಧಿತರನ್ನು ಗೋವಿಂದ ಪರಶುರಾಮ ಚೌಗುಲೆ, ಸೂರಜ ಮಸನು ತೋಪಕರ, ಮಾರುತಿ ಪಾಂಡು ಸುತಾರ, ಭರತ್ ಸುಧಾಕರ ಪಾಟೀಲ, ಶಿವಾಜಿ ಪಾಂಡು ಸುತಾರ, ಸಂತೋಷ ಅಶೋಕ ಸುತಾರ, ಯಲ್ಲಪ್ಪಾ ಪರಶುರಾಮ ರಾಘೋಜಿ, ಜ್ಯೋತಿಬಾ ಮೋನಪ್ಪಾ ತೋಪಕರ, ಸಾತೇರಿ ಪರಶುರಾಮ ಸುತಾರ, ಕಿರಣ ಲಕ್ಷ್ಮಣ ತಳವಾರ, ಪರಶುರಾಮ ಪಾಂಡು ಸುತಾರ, ಕಲ್ಲಪ್ಪಾ ನಾಗೇಂದ್ರ ತೋಪಕರ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಒಟ್ಟು 15,090 ರೂ. ಹಣ, ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular