ಬಾಲಿವುಡ್ ನಟಿ ಇಲಿಯಾನಾ ಡಿ’ಕ್ರೂಜ್ 2ನೇ ಬಾರಿಗೆ ತಾಯಿಯಾಗಿದ್ದು, ಹಲವು ನಟ, ನಟಿಯರು ಅಭಿನಂದನೆ ಸಲ್ಲಿಸಿದ್ದಾರೆ.ಅವರು ಇನ್ಸ್ಟಾಗ್ರಾಮ್ನಲ್ಲಿ ಸಂತೋಷಕರ ಸುದ್ದಿಯನ್ನು ಹಂಚಿಕೊಂಡು ತಮ್ಮ ಎರಡನೇ ಮಗು ಗಂಡು ಮಗು ಜನಿಸಿರುವುದನ್ನು ಘೋಷಿಸಿದರು.
ಅವರು ಮಗುವಿಗೆ ‘ಕೀನು ರಫೆ ಡೋಲನ್’ ಎಂದು ಹೆಸರಿಸಿದ್ದಾರೆ. ಜೂನ್ 19, 2025 ರಂದು ಮಗು ಜನಿಸಿದೆ.
ಅವರು ಈ ಶುಭ ಸುದ್ದಿಯನ್ನು ಘೋಷಿಸಿದ ಕೂಡಲೇ ಸಹನಟಿ ಪ್ರಿಯಾಂಕಾ ಚೋಪ್ರಾ ಕೂಡ ಅವರನ್ನ ಅಭಿನಂದಿಸಿದರು! ಇಲಿಯಾನಾ ಮತ್ತು ಮೈಕೆಲ್ ಡೋಲನ್ ಆಗಸ್ಟ್ 1, 2023 ರಂದು ತಮ್ಮ ಮೊದಲ ಮಗು, ಮಗ ಕೋವಾ ಫೀನಿಕ್ಸ್ ಡೋಲನ್ ಸ್ವಾಗತಿಸಿದರು.
ಶನಿವಾರ, ಇಲಿಯಾನಾ ಡಿ’ಕ್ರೂಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ನವಜಾತ ಮಗನ ಮುದ್ದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. “ನಮ್ಮ ಹೃದಯಗಳು ತುಂಬಿವೆ” ಎಂದು ಬರೆದಿದ್ದಾರೆ.
TAGGED:ಇಲಿಯಾನಾ