BREAKING: ಬೆಂಗಳೂರು ಡಿಸಿ ಕಚೇರಿಯಲ್ಲಿ ವ್ಯಕ್ತಿಯಿಂದ ಹೈಡ್ರಾಮಾ: ಐಎಎಸ್ ಅಧಿಕಾರಿ ತನಗೆ ಒದ್ದಿದ್ದಾರೆ ಎಂದು ಆರೋಪ!

ಬೆಂಗಳೂರು: ಬೆಂಗಳೂರು ನಗರ ಡಿಸಿ ಕಚೇರಿಯಲ್ಲಿ ವ್ಯಕ್ತಿಯೊಬ್ಬರು ಹೈಡ್ರಾಮ ಅನಡೆಸಿದ್ದಾರೆ ಐಎ ಎಸ್ ಅಧಿಕಾರಿಯೊಬ್ಬರು ತನ್ನನ್ನು ಕಾಲಿನಿಂದ ಒದೆಯಲು ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನ ಮೊಬೈಲ್ ನಲ್ಲಿ ದೇಶಭಕ್ತಿ ವಿಡಿಯೋ ನೋಡುತ್ತಾ ಕುಳಿತಿದ್ದೆ. ಈ ವೇಳೆ ಐಎ ಎಸ್ ಅಧಿಕಾರಿ ಬಂದು ನನ್ನನ್ನು ಒದೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿ ರಂಪಾಟ ನಡೆಸಿದ್ದಾರೆ. ಕಚೇರಿಯಲ್ಲಿಯೇ ಕೆಳಗೆ ಬಿದ್ದು ಹೊರಳಾಡಿದ್ದಾರೆ.

ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಆದಾಗ್ಯೂ ಮೇಲೆಳದ ವ್ಯಕ್ತಿ ನೆಲದಲ್ಲಿಯೇ ಬಿದ್ದು ಒದ್ದಾಡಿದ್ದಾರೆ. ವ್ಯಕ್ತಿ ಕಿರುಚಾಟದಿಂದ ಡಿಸಿ ಕಚೆರಿಯಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಬಳಿಕ ಪೊಲೀಸರು ವ್ಯಕ್ತಿಯನ್ನು ಸಮಾಧಾನಚಿತ್ತದಿಂದ ವಿಚಾರಣೆ ನಡೆಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read