ಗದಗ: ವ್ಯಕ್ತಿಯೋರ್ವ ಪಿಟ್ಸ್ ಬಂದು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘೋರ ಘಟನೆ ಗದಗ ಜಿಲ್ಲೆಯ ಭೀಷ್ಮ ಕೆರೆ ಪಕ್ಕದ ಸಿಂಹ ಕೆರೆಯಲ್ಲಿ ನಡೆದಿದೆ.
ಹುಯಿಲಗೋಳ ಗ್ರಾಮದ ವೀರೇಶ್ ಪತ್ತಾರ ಮೃತ ವ್ಯಕ್ತಿ. ಕೆರೆ ಬಳಿ ಹೋಗಿದ್ದ ವೇಳೆ ವಿರೇಶ್ ಗೆ ಏಕಾಏಕಿ ಪಿಟ್ಸ್ ಬಂದಿದ್ದು, ಪ್ರಜ್ಞೆತಪ್ಪಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ.