HomeLatest Newsಗ್ರಾಹಕರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ: ಕೇಂದ್ರದಿಂದ ಕಠಿಣ ಕ್ರಮದ ಎಚ್ಚರಿಕೆ...

ಗ್ರಾಹಕರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ: ಕೇಂದ್ರದಿಂದ ಕಠಿಣ ಕ್ರಮದ ಎಚ್ಚರಿಕೆ ಬೆನ್ನಲ್ಲೇ ಖಾದ್ಯ ತೈಲ ಕಂಪನಿಗಳ ಭರವಸೆ

ನವದೆಹಲಿ: ಖಾದ್ಯ ತೈಲ ದರ ಇಳಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.

ಚಿಲ್ಲರೆ ದರವನ್ನು ಕಡಿಮೆ ಮಾಡಿ ಗ್ರಾಹಕರ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಕಳೆದ ತಿಂಗಳು ಖಾದ್ಯ ತೈಲದ ಆಮದು ಸುಂಕವನ್ನು ಶೇಕಡ 20 ರಿಂದ ಶೇಕಡ 10 ಕ್ಕೆ ಇಳಿಕೆ ಮಾಡಿದೆ. ಇದರ ಲಾಭ ಗ್ರಾಹಕರಿಗೆ ತಲುಪಿದೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ದೇಶದ ಪ್ರಮುಖ ಖಾದ್ಯ ಸಂಸ್ಕರಣೆ ಘಟಕಗಳ ತಪಾಸಣೆ ಆರಂಭಿಸಲಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ತಂಡಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.

ಆಮದು ಸುಂಕ ಕಡಿತದ ನಂತರ ಸೂರ್ಯಕಾಂತಿ, ಸೋಯಾಬಿನ್, ತಾಳೆ ಎಣ್ಣೆಯಂತಹ ಸಂಸ್ಕರಿಸಿದ ಎಣ್ಣೆಗಳಿಗೆ ಗರಿಷ್ಠ ಚಿಲ್ಲರೆ ದರ(MRP), ವಿತರಕರಿಗೆ ಬೆಲೆ(PTD) ಕಡಿಮೆ ಮಾಡಲು ಕಾರಣವಾಗಿದೆಯೇ ಎನ್ನುವುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಾದ್ಯ ತೈಲ ಕಂಪನಿಗಳು ಚಿಲ್ಲರೆ ಮತ್ತು ಸರಬರಾಜು ಮಟ್ಟದಲ್ಲಿ ಬೆಲೆ ಇಳಿಕೆ ಮಾಡಿರುವುದನ್ನು ದೃಢಪಡಿಸಿದ್ದು, ಸುಂಕ ಇಳಿಕೆಯಿಂದ ವೆಚ್ಚದ ಸಾಗಣೆಯ ಕಡಿಮೆಯಾಗಿ.ದೆ ಹೀಗಾಗಿ ಖಾದ್ಯ ತೈಲದ ಬೆಲೆಯನ್ನು ಇನ್ನಷ್ಟು ಇಳಿಕೆ ಮಾಡುವುದಾಗಿ ಕೆಲವು ಸಂಸ್ಕರಣೆ ಘಟಕಗಳು ಭರವಸೆ ನೀಡಿವೆ. ಗಗನಕೇರಿದ್ದ ಖಾದ್ಯ ತೈಲ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಅನೇಕ ಕ್ರಮ ಕೈಗೊಂಡಿದ್ದು, ಅಮದು ಸುಂಕವನ್ನು ಇಳಿಕೆ ಮಾಡಿ ಗ್ರಾಹಕರ ಹಿತಾಸಕ್ತಿ ಕಾಪಾಡಲು ಮುಂದಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular