ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್ಸಿಎಲ್) ನೇರಳ ಮಾರ್ಗದ ಹಾಲಸೂರು ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ಜೂನ್ 22, 2025ರಂದು ಭಾನುವಾರ ನಿಗದಿತ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಬೆಳಿಗ್ಗೆ 7:00 ಗಂಟೆಯಿಂದ 9:00 ಗಂಟೆಯವರೆಗೆ ಮೆಟ್ರೋ ಸೇವೆಗಳನ್ನು, ಎಂ.ಜಿ. ರಸ್ತೆ – ಬೈಯ್ಯಪ್ಪನಹಳ್ಳಿ ಮಾರ್ಗದ ಮಧ್ಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗು ತ್ತಿದೆ ಎಂದು ಪ್ರಕಟಣೆ ಹೊರಡಿಸಿದೆ.
ನೇರಳೆ ಮಾರ್ಗದ ಇತರೆ ಮಾರ್ಗಗಳಾದ ಚಲ್ಲಘಟ್ಟದಿಂದ ಎಂ.ಜಿ. ರಸ್ತೆ, ಮತ್ತು ಬೈಯ್ಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ (ಕಾಡುಗೋಡಿ) ಹಾಗೂ ಹಸಿರು ಮಾರ್ಗದ ರೆಸ್ಟ್ ಸಂಸ್ಥೆ ಮತ್ತು ಮಾದಾವರ ನಡುವೆ ಮೆಟ್ರೋ ಸೇವೆಗಳು ಬೆಳಿಗ್ಗೆ 7:00 ಗಂಟೆಯಿಂದ ನಿಗದಿತ ಸಮಯದಂತೆ ಕಾರ್ಯನಿರ್ವಹಿಸಲಿದೆ.
ಬಿಎಂಆರ್ಸಿಎಲ್ ಈ ತಾತ್ಕಾಲಿಕ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತಿದ್ದು, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪೂರ್ವತಯಾರಿಗೆ ಯೋಜಿಸಿಕೊಳ್ಳುವಂತೆ ವಿನಂತಿಸಿಕೊಳ್ಳುತ್ತದೆ. ಸಾರ್ವಜನಿಕರ ತಿಳುವಳಿಕೆ ಮತ್ತು ಸಹಕಾರವನ್ನು ಬಿಎಂಆರ್ಸಿಎಲ್ ಪ್ರಾಮಾಣಿಕವಾಗಿ ಗೌರವಿಸುತ್ತದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ಹೊರಡಿಸಿದೆ.
ನಿಗದಿತ ನಿರ್ವಹಣಾ ಕಾಮಗಾರಿಯಿಂದಾಗಿ, ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ, ಹೆಚ್ಚಿನ ವಿವರಗಳಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ. pic.twitter.com/SaIru4wU98
— ನಮ್ಮ ಮೆಟ್ರೋ (@OfficialBMRCL) June 20, 2025
.