ಪತಿ ಸಾಲ ತೀರಿಸಿಲ್ಲವೆಂದು ಪತ್ನಿಯನ್ನು ಮರಕ್ಕೆ ಕಟ್ಟಿಹಾಕಿ ಹಿಂಸಿಸಿದ ದುಷ್ಕರ್ಮಿಗಳು

ಚಿತ್ತೂರು: ಪತಿ ಸಾಲ ತೀರಿಸದಿದ್ದಕ್ಕೆ ಪತ್ನಿಯನ್ನು ಮರಕ್ಕೆ ಕಟ್ಟಿಹಾಕಿ ದುರುಳರು ಚಿತ್ರಹಿಂಸೆ ನೀಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.

ಸಿರಿಶಾ ಎಂಬ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಿಂಸಿಸಿದ್ದಾರೆ. ಸಿರಿಶಾ ತನ್ನ ಮಗುವಿನ ಪರೀಕ್ಷಾ ಪ್ರಮಾಣಪತ್ರ ತರಲೆಂದು ಗ್ರಾಮಕ್ಕೆ ಹೋಗಿದ್ದಳು. ಮಹಿಳೆಯನ್ನು ಗಮನಿಸಿದ ಸಾಲಕೊಟ್ಟಿದ್ದ ವ್ಯಕ್ತಿ ಮುನಿಕಣ್ಣಪ್ಪ, ನಿನ್ನಪತಿ ಸಾಲ ಪಡೆದು ಮರುಪಾವತಿ ಮಾಡಿಲ್ಲ ಎಂದು ಕ್ಯಾತೆ ತೆಗೆದು ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿದ್ದಾನೆ.

ಮೂರು ವರಷಗಳ ಹಿಂದೆ ಸಿರಿಶಾ ಪತಿ ಮುನಿಕಣ್ಣಪ್ಪನಿಂದ 80, ಸಾವಿರ ರೂಪಾಯಿ ಸಾಲಪಡೆದಿದರಂತೆ. ಸಾಲ ತೀರಿಸಲು ಸಾಧ್ಯವಗದೇ ದಂಪತಿ ಮಕ್ಕಳೊಂದಿಗೆ ಕುಪ್ಪಂ ಮಂಡಲದ ನಾರಾಯಣಪುರಂ ಗ್ರಾಮ ತೊರೆದು ಹೋಗಿದ್ದರು. ಅಂದಿನಿಂದ ಸಿರಿಶಾ ತನ್ನ ಕುಟುಂಬ ಸಲಹಲು ತಾನೇ ದಿನಗೂಲಿ ಕೆಲಸ ಮಾಡುತ್ತಿದ್ದಾಳೆ. ಗ್ರಾಮಕ್ಕೆ ಬಂದಿದ್ದ ಆಕೆಯನ್ನು ನೋಡಿದ್ದ ಮುನಿಕಣ್ಣಪ್ಪ ಸಾಲದ ಹಣ ಕೇಲಿ ಬಾಯಿಗೆ ಬಂದಂತೆ ಮಾತನಾಡಿದ್ದಲ್ಲದೇ, ಮಹಿಳೆಯನ್ನು ಬೇವಿನ ಮರಕ್ಕೆ ಕಟ್ಟಿಹಾಕಿದ್ದಾನೆ. ಸಾಲದ್ದಕ್ಕೆ ಮನಬಂದಂತೆ ಥಳಿಸಿದ್ದಾನೆ. ಸಾಯಿಸಿಬಿಡುವುದಾಗಿ ಹೆದರಿಸಿದ್ದಾನೆ.

ಇದನ್ನು ಕಂಡ ಸ್ಥಳೀಯರು ಪೊಲೀಸರುಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮುನಿಕಣ್ಣಪ್ಪನನ್ನು ಬಂಧಿಸಿ ಕರೆದೊಯ್ದಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read