ವಿಜಯನಗರ : ಕಲುಷಿತ ನೀರು ಸೇವಿಸಿ 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲು ತಾಲೂಕಿನ ಮಾನ್ಯರಮಸಲವಾಡದಲ್ಲಿ ನಡೆದಿದೆ.
ಚರಂಡಿ ಮಿಶ್ರಿತ ಬೋರ್ ವೆಲ್ ನೀರು ಕುಡಿದು 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ವಾಂತಿ ಭೇದಿಯಿಂದ ಬಳಲಿದ್ದಾರೆ.
ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಹಿನ್ನೆಲೆ ಗ್ರಾಮದ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
TAGGED:ವಿಜಯನಗರ