HomeLatest NewsBIG NEWS : ಬೆಂಗಳೂರಲ್ಲಿ ಶ್ರೀಮಂತ ಸ್ನೇಹಿತನಿಗೆ 'ಮದ್ಯ' ಕುಡಿಸಿ 3 ಲಕ್ಷ ಮೌಲ್ಯದ ಚಿನ್ನ...

BIG NEWS : ಬೆಂಗಳೂರಲ್ಲಿ ಶ್ರೀಮಂತ ಸ್ನೇಹಿತನಿಗೆ ‘ಮದ್ಯ’ ಕುಡಿಸಿ 3 ಲಕ್ಷ ಮೌಲ್ಯದ ಚಿನ್ನ ದರೋಡೆ : ಮೂವರು ಆರೋಪಿಗಳು ಅರೆಸ್ಟ್.!

ಬೆಂಗಳೂರು : ಸ್ನೇಹಿತನಿಗೆ ಮದ್ಯ ಕುಡಿಸಿದ ಖತರ್ನಾಕ್ ಸ್ನೇಹಿತರು ಆತನನ್ನು ಲಾಂಗ್ ಡ್ರೈವ್ಗೆ ಕರೆದುಕೊಂಡು ಹೋಗಿ ಗ್ಯಾಂಗ್ವೊಂದಕ್ಕೆ ಸುಪಾರಿ ನೀಡಿ ಟೈಟಾದ ಸ್ನೇಹಿತನನ್ನೇ ದರೋಡೆ ಮಾಡಿಸಿದ ಘಟನೆ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದರೋಡೆಗೆ ಒಳಗಾದವರನ್ನು ಚುಂಚಕಟ್ಟ ಮುಖ್ಯರಸ್ತೆಯ ಶಿವಶಕ್ತಿನಗರ ನಿವಾಸಿ ಚಂದನ್ (23) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಪವನ್, ಅಚಲ್ ಹಾಗೂ ಪ್ರೇಮ್ ಶೆಟ್ಟಿ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪವನ್ ಹಾಗೂ ಅಚಲ್ ಮೇ 1ರಂದು ಸ್ನೇಹಿತ ಚಂದನ್ ನ್ನು ಬಾರ್ ಗೆ ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿದ್ದಾರೆ. ನಂತರ ಆತನನ್ನು ಲಾಂಗ್ ಡ್ರೈವ್ ಗೆ ಕರೆದೊಯ್ದಿದ್ದಾರೆ. ಬಳಿಕ ಪ್ರೇಮ್ ಶೆಟ್ಟಿ ಎಂಬಾತನಿಗೆ ಸುಪಾರಿ ನೀಡಿ ಚಂದನ್ ಧರಿಸಿದ್ದ ಚಿನ್ನಾಭರಣ ದರೋಡೆ ಮಾಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆಲ್ಲಗುಂಟೆ ಸಮೀಪದ ಗಂಟಿಗಾನಹಳ್ಳಿ ಸರ್ಕಲ್ ಬಳಿ ಚಂದನ್ ಮೇಲೆ ಹಲ್ಲೆ ನಡೆಸಿ ಸುಮಾರು 3ಲಕ್ಷ ರು. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದಾರೆ.ತನಿಖೆ ಆರಂಭದಲ್ಲಿ ಪವನ್ ಮತ್ತು ಅಚಲ್ನನ್ನು ವಿಚಾರಣೆ ಮಾಡಿದಾಗ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಆದರೆ, ಅವರ ಮೊಬೈಲ್ ಕರೆಗಳ ವಿವರ ಸಂಗ್ರಹಿಸಿ ಪರಿಶೀಲಿಸಿದಾಗ ಸತ್ಯಾಂಶ ಬಯಲಾಗಿದೆ. ಪ್ರೇಮ್ ಶೆಟ್ಟಿ ಗ್ಯಾಂಗ್ಗೆ ಸುಪಾರಿ ನೀಡಿ ಸ್ನೇಹಿತ ಚಂದನ್ನನ್ನು ದರೋಡೆ ಮಾಡಿಸಿದ್ದ ವಿಚಾರ ಬೆಳಕಿಗೆ ಬಂದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular