HomeLatest NewsGOOD NEWS : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : 'ನಿವೃತ್ತಿ...

GOOD NEWS : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ‘ನಿವೃತ್ತಿ ವೇತನ’ ಹೆಚ್ಚಳ ಮಾಡಿ ಸರ್ಕಾರ ಆದೇಶ.!

ಬೆಂಗಳೂರು : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಎಂಬಂತೆ ನಿವೃತ್ತಿ ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ಸರ್ಕಾರಿ ಅನುದಾನಿತ ಪೂರ್ವ ಪ್ರಾಥಮಿಕ ಶಾಲಾ ಸಿಬ್ಬಂದಿ ಸಂಘ (ರಿ). ಇವರು ಸರ್ಕಾರಕ್ಕೆ ಸಲ್ಲಿಸಿದ ಮನವಿಯ ಅಂಶಗಳನ್ನು ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳುವಂತೆ ಉಲ್ಲೇಖಿತ(1) ರಲ್ಲಿ ಸೂಚಿಸಿದಂತೆ, ಪರಿಶೀಲಿಸಲಾಗಿ ಸದರಿ ನೌಕರರಿಗೆ ಸರ್ಕಾರ ವಿವಿಧ ಹಂತದಲ್ಲಿ/ವರ್ಷಗಳಲ್ಲಿ ರೂ.380/- ರಿಂದ ಪ್ರಾರಂಭಿಸಿ, ಪ್ರಸ್ತುತ ಸರ್ಕಾರದ ಪತ್ರ ಸಂಖ್ಯೆ: ಇಡಿ 08 ಪಿಎಂಸಿ 2016 ಬೆಂಗಳೂರು ದಿನಾಂಕ:28-08-2018ರಲ್ಲಿ ಅನುದಾನಿತ ಪೂರ್ವ ಪ್ರಾಥಮಿಕ ಶಾಲೆಗಳ ನಿವೃತ್ತ ಶಿಕ್ಷಕಿಯರಿಗೆ ರೂ. 11500/- ಮತ್ತು ಸಹಾಯಕಿಯರಿಗೆ ರೂ.9000/-ಗಳಂತೆ ನೀಡಲಾಗುತ್ತಿದೆ.

ಮುಂದುವರೆದು, ಸರ್ಕಾರದ ದಿನಾಂಕ:-26-05-2025ರ ಆದೇಶದಂತೆ ದಿನಾಂಕ:01.04.1984ರ ಪೂರ್ವದಲ್ಲಿ ಅನುದಾನಕ್ಕೆ ಒಳಪಟ್ಟಿರುವ ಅನುದಾನಿತ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಅನುದಾನಸಹಿತ ಅನುಮೋದನೆಗೊಂಡು ನಿವೃತ್ತರಾಗಿರುವ ಶಾಲಾ ಶಿಕ್ಷಕರ ಸಂಚಿತ ಪಿಂಚಣಿಯನ್ನು ಪ್ರಸ್ತುತ ನೀಡಲಾಗುತ್ತಿರುವ ಮಾಹೆಯಾನ ರೂ.11,500/-ಗಳಿಂದ ರೂ.19,000/-(ರೂ. ಹತ್ತೊಂಭತ್ತು ಸಾವಿರಗಳು ಮಾತ್ರ) ಗಳಿಗೆ ಹಾಗೂ ಶಾಲಾ ಸಹಾಯಕರ ಸಂಚಿತ ಪಿಂಚಣಿಯನ್ನು ಮಾಹೆಯಾನ ರೂ.9,000/-ಗಳಿಂದ ರೂ.15,000/-(ರೂ. ಹದಿನೈದು ಸಾವಿರಗಳು ಮಾತ್ರ) ಗಳಿಗೆ ಭವಿಷ್ಯಾವರ್ತಿಯಾಗಿ ಪರಿಷ್ಕರಿಸಿ ಆದೇಶಿಸಲಾಗಿದೆ. ಸದರಿ ಸರ್ಕಾರದ ಉಲ್ಲೇಖಿತ(2)ರ ಪತ್ರದಂತೆ ಅಗತ್ಯ ಕ್ರಮವಹಿಸಲು ರಾಜ್ಯದ ಎಲ್ಲಾ ಉಪನಿರ್ದೇಶಕರು(ಆ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular