ಬೆಂಗಳೂರು : ಬೆಂಗಳೂರು ಕಾಲ್ತುಳಿತ ದುರಂತದ ಬಳಿಕ ‘KSCA’ ಸೆಕ್ರೆಟರಿ ಸ್ಥಾನಕ್ಕೆ ಶಂಕರ್ ರಾಜೀನಾಮೆ ನೀಡಿದ್ದಾರೆ. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅದೇ ರೀತಿ KSCA ಖಜಾಂಚಿ ಸ್ಥಾನಕ್ಕೆ ಜೈರಾಮ್ ಕೂಡ ರಾಜೀನಾಮೆ ನೀಡಿದ್ದಾರೆ. ಇಬ್ಬರು ಕೂಡ ನೈತಿಕ ಹೊಣೆ ಹೊತ್ತು ನಿನ್ನೆ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತದಲ್ಲಿ 11 ಮಂದಿ ಬಲಿಯಾಗಿದ್ದಾರೆ. ಘಟನೆಗೆ ದೇಶಾದ್ಯಂತ ಜನರು ಮರುಗಿ ಕಂಬನಿ ಮಿಡಿದಿದ್ದಾರೆ. ದುರಂತಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರ ಹಲವು ಪೊಲೀಸ್ ಅಧಿಕಾರಿಗಳನ್ನು ಹೊಣೆ ಮಾಡಿ ಅಮಾನತು , ವರ್ಗಾವಣೆ ಮಾಡಿದೆ.

