ನಟ ನಾಗಾರ್ಜುನ ಮತ್ತು ಅಮಲಾ ಅಕ್ಕಿನೇನಿ ಅವರ ಪುತ್ರ ಅಖಿಲ್ ಅಕ್ಕಿನೇನಿ ಜೈನಾಬ್ ರಾವ್ಜಿ ಅವರನ್ನು ವಿವಾಹವಾದರು.
ಜೂನ್ 6, 2025 ರಂದು ಶುಕ್ರವಾರ ಹೈದರಾಬಾದ್ನಲ್ಲಿ ನಡೆದ ಆತ್ಮೀಯ ವಿವಾಹ ಸಮಾರಂಭದಲ್ಲಿ ಪ್ರೇಮ ಪಕ್ಷಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜೈನಾಬ್ ಮತ್ತು ಅಖಿಲ್ ಅಕ್ಕಿನೇನಿ ಅವರ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಜೈನಬ್ ನೀಲಿಬಣ್ಣದ ರೇಷ್ಮೆ ಸೀರೆಯಲ್ಲಿ ಮಿಂಚಿದ್ದರೆ , ಅಖಿಲ್ ಸರಳವಾದ ಕುರ್ತಾ ಮತ್ತು ಧೋತಿಯಲ್ಲಿ ಮಿಂಚುತ್ತಿದ್ದರು. ವಿವಾಹ ಸಮಾರಂಭದಲ್ಲಿ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ವಿವಾಹ ಮಹೋತ್ಸವದಲ್ಲಿ ಹಾಜರಿದ್ದರು. ಚಿರಂಜೀವಿ, ರಾಮ್ ಚರಣ್ ಮತ್ತು ಪ್ರಶಾಂತ್ ನೀಲ್ ಅವರಂತಹ ಗಣ್ಯರು ಸಹ ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.
You Might Also Like
TAGGED:ಗೆಳತಿ ಜೈನಾಬ್