ಬೆಂಗಳೂರು : ಮಾತು ಕೇಳದ ಮಕ್ಕಳಿಗೆ ತಂದೆ ಸಹಜವಾಗಿ ಬೈದು ಬುದ್ದಿ ಹೇಳುತ್ತಾರೆ. ಆದರೆ ಇಲ್ಲೋರ್ವ ಪಾಪಿ ತಂದೆ 10 ವರ್ಷದ ಮಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿ ರಾಕ್ಷಸೀಯ ವರ್ತನೆ ಮೆರೆದಿದ್ದಾನೆ.
ಈ ಘಟನೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲೋಕೇಶ್ ಎಂಬಾತ ಮಗಳ ಮೇಲೆ ಅಮಾನುಷ ಕೃತ್ಯ ಎಸಗಿದ್ದಾನೆ. ಮಗಳು ಮಾತು ಕೇಳಿಲ್ಲ ಎಂಬ ಕಾರಣಕ್ಕೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಬಾಲಕಿಯ ದೇಹದ ಮೇಲೆಲ್ಲಾ ಬಾಸುಂಡೆ ಬಂದಿದೆ. ಹಲವು ಕಡೆ ರಕ್ತ ಹೆಪ್ಪುಗಟ್ಟಿದೆ. ಸದ್ಯ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಗಳ ಮೇಲೆ ಹಲ್ಲೆ ನಡೆಸುತ್ತಿದ್ದರೂ ತಾಯಿ ಅಮೃತಾ ಸುಮ್ಮನೆ ಇರುತ್ತಿದ್ದರು ಎನ್ನಲಾಗಿದೆ. ಬಾಲಕಿಯ ಕಿರುಚಾಟ ಕೇಳಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಲೋಕೇಶ್ ನನ್ನು ವಶಕ್ಕೆ ಪಡೆದು ಬಾಲಕಿಯನ್ನು ರಕ್ಷಿಸಿದ್ದಾರೆ. ನೇಪಾಳ ಮೂಲದ ಲೋಕೇಶ್ ಮತ್ತು ಅಮೃತ ದಂಪತಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು.
TAGGED:ಅಮಾನವೀಯ ಘಟನೆ