ಮಹಾರಾಷ್ಟ್ರದ ಮುಂಬೈನಲ್ಲಿ ಹಳೆ ದ್ವೇಷಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು 45 ವರ್ಷದ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಹಲವು ಬಾರಿ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಭಾನುವಾರ ರಾತ್ರಿ ಮುಂಬೈನ ಚೀತಾ ಕ್ಯಾಂಪ್ ಪ್ರದೇಶದಲ್ಲಿ ನಡೆದ ಈ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಈಗ ವೈರಲ್ ಆಗಿದೆ.
ಘಟನೆ ನಡೆದಿದ್ದು, ಮೊಹಮ್ಮದ್ ಇಬ್ರಾಹಿಂ ಎಂಬುವವರು ಕಬ್ಬಿಣದ ಅಂಗಡಿಯ ಬಳಿ ಕುಳಿತಿದ್ದಾಗ. ಸಿಸಿ ಟಿವಿ ದೃಶ್ಯಾವಳಿಗಳ ಪ್ರಕಾರ, ಆರೋಪಿಗಳಲ್ಲಿ ಒಬ್ಬನು ಅಂಗಡಿಯ ಪಕ್ಕದಲ್ಲಿ ನಡೆದು ಹೋಗಿ, ಕೆಲವೇ ಕ್ಷಣಗಳಲ್ಲಿ ಚಾಕುವಿನೊಂದಿಗೆ ಹಿಂದಿರುಗಿ ಇಬ್ರಾಹಿಂ ಮೇಲೆ ಹಠಾತ್ ದಾಳಿ ನಡೆಸಿದ್ದಾನೆ. ಸ್ವಲ್ಪ ಸಮಯದ ನಂತರ, ಎರಡನೇ ವ್ಯಕ್ತಿಯೂ ಸೇರಿಕೊಂಡು ಇಬ್ರಾಹಿಂಗೆ ಹಲವು ಬಾರಿ ಚಾಕುವಿನಿಂದ ಇರಿದು, ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಭೀಕರ ದಾಳಿಯ ನಂತರ, ಹಲವಾರು ದಾರಿಹೋಕರು ಮತ್ತು ಸ್ಥಳೀಯ ನಿವಾಸಿಗಳು ಇಬ್ರಾಹಿಂ ನೆರವಿಗೆ ಧಾವಿಸಿದ್ದಾರೆ. ತಕ್ಷಣವೇ ಅವರ ಕುಟುಂಬದವರು ಸಿಯಾನ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಪ್ರಾಣಾಪಾಯ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
A 45-year-old man, Mohammad Ibrahim, was critically injured after being stabbed by two individuals in the Cheeta Camp area late last night. The violent incident, believed to have stemmed from an old enmity, was caught on CCTV. After the attack, the assailants fled the scene.… pic.twitter.com/TCRAjlVtLm
— Mid Day (@mid_day) June 2, 2025