HomeLatest News25 ಕೋಟಿ ರೂ. ಟೆಂಡರ್ ಕೊಡಿಸುವುದಾಗಿ ಗುತ್ತಿಗೆದಾರನಿಗೆ ವಂಚನೆ: ಸಚಿವರ ಅಳಿಯ ಸೇರಿ ಐವರ ವಿರುದ್ಧ...

25 ಕೋಟಿ ರೂ. ಟೆಂಡರ್ ಕೊಡಿಸುವುದಾಗಿ ಗುತ್ತಿಗೆದಾರನಿಗೆ ವಂಚನೆ: ಸಚಿವರ ಅಳಿಯ ಸೇರಿ ಐವರ ವಿರುದ್ಧ ಎಫ್ಐಆರ್

ಕಲಬುರಗಿ: 25 ಕೋಟಿ ರೂಪಾಯಿ ಮೊತ್ತದ ಟೆಂಡರ್ ವರ್ಕ್ ಆರ್ಡರ್ ಕೊಡಿಸುವುದಾಗಿ 1.21 ಕೋಟಿ ರೂ. ವಂಚಿಸಿದ ಆರೋಪದಡಿ ಕಲಬುರಗಿಯ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 20 ಕೋಟಿ ರೂ., ರಾಜ್ಯ ಸರ್ಕಾರದ 5 ಕೋಟಿ ರೂ. ಮೊತ್ತದ ಟೆಂಡರ್ ವರ್ಕ್ ಆರ್ಡರ್ ಕೊಡಿಸುವುದಾಗಿ ನಂಬಿಸಿ ಉಪ ಗುತ್ತಿಗೆದಾರನಿಂದ 1.21 ಕೋಟಿ ರೂ. ಪಡೆದು ವಂಚಿಸಿದ ಆರೋಪದಡಿ ರಾಜ್ಯದ ಸಚಿವರೊಬ್ಬರ ಅಳಿಯ ಸೇರಿದಂತೆ 5 ಮಂದಿ ವಿರುದ್ಧ ಕೇಸು ದಾಖಲಾಗಿದೆ.

ಲಕ್ಷ್ಮಿಕಾಂತ ಕಟ್ಟಿಮನಿ, ಸಂತೋಷ್ ನಾಯಕ, ಕಿರಣ್, ಶ್ರೀಧರ್ ಮತ್ತು ರವಿ ಮಾಲಿಪಾಟೀಲ್ ಅವರ ವಿರುದ್ಧ ಉಪ ಗುತ್ತಿಗೆದಾರ ದೂರು ನೀಡಿದ್ದಾರೆ. ಆರೋಪಿಗಳು 25 ಕೋಟಿ ರೂಪಾಯಿಯ ವರ್ಕ್ ಆರ್ಡರ್ ಕೊಡಿಸುವುದಾಗಿ ನಂಬಿಸಿದ್ದು, ಅವರ ಬೇಡಿಕೆಯಂತೆ 1.21 ಕೋಟಿ ರೂ.ಗಳನ್ನು ಆರೋಪಿ ಸಂತೋಷ್ ನಾಯಕ್ ಖಾತೆಗೆ ಉಪ ಗುತ್ತಿಗೆದಾರ ಜಮಾ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ವರ್ಕ್ ಆರ್ಡರ್ ಕೊಡಿಸಿರಲಿಲ್ಲ. ಹಣ ವಾಪಸ್ ಕೊಡುವಂತೆ ಕೇಳಿದಾಗ 50 ಲಕ್ಷದ ಚೆಕ್ ನೀಡಿದ್ದು, ಆ ಚೆಕ್ ಬೌನ್ಸ್ ಆಗಿದ್ದ ಹಿನ್ನೆಲೆಯಲ್ಲಿ ಉಪ ಗುತ್ತಿಗೆದಾರ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular