ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರ ಹೆಲ್ಮೆಟ್ಗೆ ಪೆಟ್ಟು ಬಿದ್ದಿತ್ತು. ಕೊಹ್ಲಿ ಬೇಗನೆ ತನ್ನ ಹಿಡಿತವನ್ನು ಮರಳಿ ಪಡೆದು ಆಟ ಮುಂದುವರಿಸಿದಾಗ, ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಕ್ರೀಡಾಂಗಣದಿಂದ ಶಾಕಿಂಗ್ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ಈ ಕ್ಲಿಪ್ನಲ್ಲಿ, ಚೆಂಡು ಕೊಹ್ಲಿಯ ಹೆಲ್ಮೆಟ್ಗೆ ತಗುಲಿದಾಗ ಅನುಷ್ಕಾ ಶರ್ಮಾ ಚಿಂತೆಗೀಡಾಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಆಕೆಯ ಕೈಗಳು ಮುಖದ ಮೇಲೆ ಹೋಗಿದ್ದು, ಕಳವಳದ ಭಾವನೆ ವ್ಯಕ್ತಪಡಿಸಿದ್ದಾರೆ. ವಿರಾಟ್ಗೆ ಪೆಟ್ಟು ಬಿದ್ದ ನಂತರ ಅನುಷ್ಕಾ ಅವರ ಫೋಟೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ ಮತ್ತು “ವಿರಾಟ್ ಕೊಹ್ಲಿ ಹೆಲ್ಮೆಟ್ಗೆ ಚೆಂಡು ತಗುಲಿದಾಗ ಅನುಷ್ಕಾ ಶರ್ಮಾ ಭಯಭೀತರಾದರು” ಎಂದು ಬರೆದಿದ್ದಾರೆ.
ಅನುಷ್ಕಾ ಶರ್ಮಾ ಹೆಚ್ಚಾಗಿ ವಿರಾಟ್ ಕೊಹ್ಲಿಯ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲ್ಲ. ಪತಿ ಆಟವನ್ನು ನೋಡುತ್ತಾ ಹುರಿದುಂಬಿಸುತ್ತಾರೆ. ನಟಿ 2017 ರಲ್ಲಿ ಕೊಹ್ಲಿಯನ್ನು ವಿವಾಹವಾಗಿದ್ದು ಅವರಿಗೆ ಇಬ್ಬರು ಮಕ್ಕಳಿದ್ದಾರೆ . ಮಗಳ ಹೆಸರು ವಾಮಿಕಾ ಮತ್ತು ಮಗ ಅಕಾಯ್.