ಬೆಂಗಳೂರಿಗರೇ ಗಮನಿಸಿ : ಉದ್ಯಾನವನಗಳಿಗೆ ಪ್ರವೇಶ ನಿರಾಕರಿಸಿದರೆ ಈ ಸಂಖ್ಯೆಗೆ ದೂರು ನೀಡಿ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿನ ಉದ್ಯಾವನಗಳಿಗೆ ಬೆಳಿಗ್ಗೆ 5ರಿಂದ ರಾತ್ರಿ 10ರ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರಾಕರಿಸಿದರೆ ಸಹಾಯವಾಣಿ ಸಂಖ್ಯೆ 1533ಕ್ಕೆ ಕರೆ ಮಾಡಿ ದೂರು ನೀಡಬೇಕು ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರಿತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 1,287 ಉದ್ಯಾನಗಳಿದ್ದು, ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಬೇಕೆಂಬ ಉದ್ದೇಶದಿಂದ 2024ರ ಜೂನ್ 12ರಿಂದ ಸಮಯ ನಿಗದಿಮಾಡಲಾಗಿದೆ. ಈ ಸಮಯದಲ್ಲಿ ಯಾವುದೇ ಉದ್ಯಾನಗಳಲ್ಲಾಗಲಿ ಸಾರ್ವಜನಿಕರ ಪ್ರವೇಶವನ್ನು ನಿರಾಕರಿಸುವಂತಿಲ್ಲ. ಉದ್ಯಾನಗಳನ್ನು ಮುಚ್ಚಿದ್ದರೆ ಅಥವಾ ಪ್ರವೇಶ ನಿರಾಕರಿಸಿದರೆ ಅಂತಹ ಉದ್ಯಾನದ ಛಾಯಾಚಿತ್ರದೊಂದಿಗೆ ವಾಟ್ಸಾಪ್ ಸಂಖ್ಯೆ 94806 85700, ಸಹಾಯ 2.0 ತಂತ್ರಾಂಶ ಹಾಗೂ ಇಮೇಲ್– scfeccm2024@gmail.com ಮೂಲಕ ದೂರು ನೀಡಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read