ವಾಷಿಂಗ್ಟನ್: ಆಪಲ್ ಕಂಪನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಐಫೋನ್ ತಯಾರಿಸದಿದ್ದರೆ ಶೇಕಡ 25ರಷ್ಟು ಆಮದು ಸುಂಕ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
‘ಭಾರತದಲ್ಲಿ ಅಥವಾ ಬೇರೆಲ್ಲಿಯಾದರೂ’ ಐಫೋನ್‌ಗಳನ್ನು ತಯಾರಿಸಿದರೆ ಆಪಲ್ ಗೆ ಶೇಕಡಾ 25 ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
“ಭಾರತ ಅಥವಾ ಬೇರೆಲ್ಲಿಯಾದರೂ” ಕಂಪನಿಯು ಐಫೋನ್‌ಗಳನ್ನು ತಯಾರಿಸುವುದನ್ನು ಮುಂದುವರಿಸಿದರೆ ಆಪಲ್ ಉತ್ಪನ್ನಗಳ ಮೇಲೆ ಶೇಕಡ 25 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪನಿ ವಾಷಿಂಗ್ಟನ್‌ಗೆ ಶೇಕಡ 25 ರಷ್ಟು ಸುಂಕವನ್ನು ಪಾವತಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಭಾರತ ಅಥವಾ ಬೇರೆಲ್ಲಿಯೂ ಅಲ್ಲ, ಅಮೆರಿಕದಲ್ಲಿಯೇ ತಯಾರಿಸಬೇಕು. ಹಾಗೆ ಆಗದಿದ್ದರೆ, ಆಪಲ್ ಅಮೆರಿಕಕ್ಕೆ ಕನಿಷ್ಠ 25% ಸುಂಕವನ್ನು ಪಾವತಿಸಬೇಕು ಎಂದು ನಾನು ಬಹಳ ಹಿಂದೆಯೇ ಆಪಲ್ ನ ಟಿಮ್ ಕುಕ್‌ಗೆ ತಿಳಿಸಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಭಾರತ ಅಥವಾ ಬೇರೆಲ್ಲಿಯೂ ಅಲ್ಲ, ಅಮೆರಿಕದಲ್ಲಿಯೇ ತಯಾರಿಸಬೇಕು. ಹಾಗೆ ಆಗದಿದ್ದರೆ, ಆಪಲ್ ಅಮೆರಿಕಕ್ಕೆ ಕನಿಷ್ಠ 25% ಸುಂಕವನ್ನು ಪಾವತಿಸಬೇಕು ಎಂದು ನಾನು ಬಹಳ ಹಿಂದೆಯೇ ಆಪಲ್ ನ ಟಿಮ್ ಕುಕ್‌ಗೆ ತಿಳಿಸಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ.
ಏತನ್ಮಧ್ಯೆ, ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಕಡಿಮೆ ಮಾಡುವ ಯಾವುದೇ ಸೂಚನೆಯನ್ನು ಆಪಲ್ ನೀಡಿಲ್ಲ. ಟ್ರಂಪ್ ಅವರ ಹೇಳಿಕೆಗಳ ನಂತರ ಅಧಿಕಾರಿಗಳು ಆಪಲ್ ಕಾರ್ಯನಿರ್ವಾಹಕರೊಂದಿಗೆ ಮಾತನಾಡಿದ್ದಾರೆ ಮತ್ತು ಭಾರತಕ್ಕಾಗಿ ಟೆಕ್ ದೈತ್ಯನ ಹೂಡಿಕೆ ಯೋಜನೆಗಳು “ಹಾಳಾಗಿಲ್ಲ” ಎಂದು ಭರವಸೆ ನೀಡಲಾಗಿದೆ ಎಂದು ಭಾರತ ಸರ್ಕಾರದ ಮೂಲಗಳು ದೃಢಪಡಿಸಿವೆ.
“ಆಪಲ್ ಭಾರತದಲ್ಲಿ ತನ್ನ ಹೂಡಿಕೆ ಯೋಜನೆಗಳು ದೃಢವಾಗಿವೆ ಮತ್ತು ಭಾರತವನ್ನು ತನ್ನ ಉತ್ಪನ್ನಗಳಿಗೆ ಪ್ರಮುಖ ಉತ್ಪಾದನಾ ನೆಲೆಯಾಗಿ ಮುಂದುವರಿಸಲು ಪ್ರಸ್ತಾಪಿಸಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಆಪಲ್ ಪ್ರಸ್ತುತ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 40 ಮಿಲಿಯನ್ ಐಫೋನ್‌ಗಳನ್ನು ಜೋಡಿಸುತ್ತದೆ, ಇದು ಅದರ ಜಾಗತಿಕ ಉತ್ಪಾದನೆಯ ಸರಿಸುಮಾರು 15% ರಷ್ಟಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕಳೆದ ತಿಂಗಳು ಭಾರತವು 2025 ರ ಹಣಕಾಸು ವರ್ಷದಲ್ಲಿ ₹1.5 ಲಕ್ಷ ಕೋಟಿ ($18 ಬಿಲಿಯನ್) ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ ಎಂದು ಘೋಷಿಸಿದರು. ಭಾರತದಲ್ಲಿ ಆಪಲ್‌ನ ಪೂರೈಕೆ ಸರಪಳಿಯು ಸುಮಾರು 2,00,000 ಜನರಿಗೆ ಉದ್ಯೋಗ ನೀಡುತ್ತದೆ ಎಂದು ಅಂದಾಜಿಸಲಾಗಿದೆ.