ಬೆಂಗಳೂರು: ಯಾವುದೇ ಕಾರಣಕ್ಕೂ ಕೇಸ್ ಹಿಂಪಡೆಯಲ್ಲ, ಮಡೆನೂರು ಮನುಗೆ ಕಾನೂನು ಪ್ರಕಾರ ಶಿಕ್ಷೆಯಾಗಲೇಬೇಕು ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತೆ, ಕೇಸ್ ಹಿಂಪಡೆಯುವ ಪ್ರಶ್ನೆ ಇಲ್ಲ. ನನ್ನ ಬಳಿ ಸಾಕಷ್ಟು ಸಾಕ್ಷಾಧಾರಗಳಿವೆ. ಹಂತ ಹಂತವಾಗಿ ಎಲ್ಲಾ ಸಾಕ್ಷ್ಯಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.
ಇದರಲ್ಲಿ ಅಪ್ಪಣ್ಣನದ್ದು ಯಾವುದೇ ತಪ್ಪಿಲ್ಲ. ಬಲವಂತದಿಂದ ನನ್ನ ಕೈಯಲ್ಲಿ ವಿಡಿಯೋ ಮಾಡಿಸಿಕೊಂಡಿದ್ದಾರೆ. ಮನು ನನ್ನ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಸಿನಿಮಾ ಮಾಡಿದ ಬಳಿಕ ನಮ್ಮಿಬ್ಬರ ನಡುವೆ ಗಲಾಟೆಯಾಗಿತ್ತು. ಹೆಂಡತಿಯಿಂದಲೇ ಮಡೆನೂರು ಮನು ಹಾಳಾಗಿರುವುದು. ಆಕೆಯ ಗಂಡ ಮಾಡಿರುವುದು ಮನೆಹಾಳು ಕೆಲಸ. ಅವರು ಮನೆಯಲ್ಲಿ ಬೆಚ್ಚಗಿದ್ದಾರೆ. ನಾನು ಬೀದಿಯಲ್ಲಿದ್ದೇನೆ ಎಂದು ಕಿಡಿಕಾರಿದ್ದಾರೆ.