ಮೈಸೂರು : ವಿದೇಶಿ ಬಾತುಕೋಳಿ ಸಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಜುಲೈ 4 ರಂದು ಕೋರ್ಟ್ ಗೆ ಹಾಜರಾಗುವಂತೆ ನಟ ದರ್ಶನ್ ಗೆ ಸಮನ್ಸ್ ಜಾರಿ ಮಾಡಲಾಗಿದೆ.
ಟಿ ನರಸೀಪುರ ಕೋರ್ಟ್ ಜುಲೈ 4 ರಂದು ಕೋರ್ಟ್ ಗೆ ಹಾಜರಾಗುವಂತೆ ನಟ ದರ್ಶನ್ ಗೆ ಸಮನ್ಸ್ ಜಾರಿ ಮಾಡಿದೆ. ದರ್ಶನ್, ವಿಜಯಲಕ್ಷ್ಮೀ ಮತ್ತು ದರ್ಶನ್ ಮ್ಯಾನೇಜರ್ ಗೆ ನೋಟಿಸ್ ಜಾರಿ ಮಾಡಿದೆ.
ನಟ ದರ್ಶನ್ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ವಿದೇಶಿ ತಳಿ ಬಾರ್ ಹೆಡೆಡ್ ಗೂಸ್ ಎಂಬ ಬಾತುಕೋಳಿ ಸಾಕಿದ್ದರು. ಈ ಹಿನ್ನೆಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಬಾತುಕೋಳಿಯನ್ನು ತಮ್ಮ ವಶಕ್ಕೆ ಪಡೆದಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ನೋಟಿಸ್ ನೀಡಿದೆ.
TAGGED:ಸಮನ್ಸ್
