ಅಬುಧಾಬಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ‘ಸಿಂದೂರ್ ಈಗ ನ್ಯಾಯ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ’ ಎಂದು ಯುಎಇಯಲ್ಲಿ ಸಂಸದೆ ಬಾನ್ಸುರಿ ಸ್ವರಾಜ್ ಹೇಳಿದ್ದಾರೆ.
ಆಪರೇಷನ್ ಸಿಂದೂರ್ ಕುರಿತ ಜಾಗತಿಕ ಪ್ರಚಾರ ಅಭಿಯಾನದ ಸಂದರ್ಭದಲ್ಲಿ ಶಿವಸೇನಾ ಸಂಸದ ಶ್ರೀಕಾಂತ್ ಏಕನಾಥ್ ಶಿಂಧೆ ನೇತೃತ್ವದ ಉನ್ನತ ಮಟ್ಟದ ಸರ್ವಪಕ್ಷ ನಿಯೋಗದ ಭಾಗವಾಗಿರುವ ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕಿ ಬಾನ್ಸುರಿ ಸ್ವರಾಜ್, ಯುಎಇಯಲ್ಲಿರುವ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದರು.
ಭಾರತ ಮತ್ತು ಗಲ್ಫ್ ರಾಷ್ಟ್ರದ ನಡುವೆ ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸುವಲ್ಲಿ ಅವರ ಪ್ರಮುಖ ಪಾತ್ರಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿಲುವಿನ ಬಗ್ಗೆ ಮಾತನಾಡಿದ ಅವರು, ಭಾರತೀಯ ಸಶಸ್ತ್ರ ಪಡೆಗಳು ತೋರಿಸಿದ ಶೌರ್ಯದಿಂದಾಗಿ ಸಿಂದೂರ್ ಈಗ ನ್ಯಾಯ, ಶಕ್ತಿಗೆ ಹೊಸ ಸಮಾನಾರ್ಥಕವಾಗಿದೆ ಎಂದು ಹೇಳಿದರು.
ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟದ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಭಾರತೀಯ ವಲಸಿಗರ ಶಕ್ತಿ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಭಾರತ ಆಕ್ರಮಣಕಾರಿಯಲ್ಲ ಎಂದು ತಮ್ಮ ಸಮುದಾಯಗಳು, ಕೆಲಸದ ಸ್ಥಳಗಳು, ಪೂಜಾ ಸ್ಥಳಗಳು ಮತ್ತು ಮನೆಗಳಿಗೆ ತಿಳಿಸುವಂತೆ ವಲಸೆಗಾರರಿಗೆ ಕರೆ ನೀಡಿದ್ದಾರೆ.
ಏಪ್ರಿಲ್ 22 ರಂದು ನಡೆದದ್ದು ನಮ್ಮ ನಂಬಿಕೆ, ನಮ್ಮ ಅಸ್ತಿತ್ವದ ಮೇಲೆ ನಡೆದ ಅನಾಗರಿಕ ದಾಳಿ. ನಾವು ಒಂಬತ್ತು ಭಯೋತ್ಪಾದಕ ನೆಲೆಗಳಿಗೆ ಸೂಕ್ತ ಉತ್ತರ ನೀಡಿದ್ದೇವೆ. ಆದರೆ ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧದ ಜಾಗತಿಕ ಯುದ್ಧದಲ್ಲಿ ನಮ್ಮೊಂದಿಗೆ ಸೇರುವ ಬದಲು, ಸಮಸ್ಯೆಯನ್ನು ಮಿಲಿಟರಿಯಾಗಿ ಉಲ್ಬಣಗೊಳಿಸಲು ನಿರ್ಧರಿಸಿತು. ಅವರು ನಮ್ಮ ಬಾಗಿಲಿಗೆ ಯುದ್ಧವನ್ನು ತಂದರೆ ನಾವು ಅದನ್ನು ಕೊನೆಗೊಳಿಸುತ್ತೇವೆ. “ಅಗಾಧ ಸಂಯಮ, ಪ್ರಚಂಡ ಪ್ರಬುದ್ಧತೆ” ಭಾರತದ ಪ್ರತಿಕ್ರಿಯೆಯಾಗಿದೆ ಎಂದು ಸ್ವರಾಜ್ ಹೇಳಿದ್ದಾರೆ.
ಯುಎಇಯಲ್ಲಿ ಭಾರತೀಯ ನಿಯೋಗವನ್ನು ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ನೇತೃತ್ವ ವಹಿಸಿದ್ದಾರೆ. ಸರ್ವಪಕ್ಷ ನಿಯೋಗದಲ್ಲಿ ಸಂಸದರಾದ ಬಾನ್ಸುರಿ ಸ್ವರಾಜ್, ಇಟಿ ಮೊಹಮ್ಮದ್ ಬಶೀರ್, ಅತುಲ್ ಗರ್ಗ್, ಸಸ್ಮಿತ್ ಪಾತ್ರ, ಮನನ್ ಕುಮಾರ್ ಮಿಶ್ರಾ, ಬಿಜೆಪಿ ನಾಯಕ ಸುರೇಂದ್ರಜೀತ್ ಸಿಂಗ್ ಅಹ್ಲುವಾಲಿಯಾ ಮತ್ತು ಮಾಜಿ ರಾಯಭಾರಿ ಸುಜನ್ ಚಿನೋಯ್ ಇದ್ದಾರೆ. ಸರ್ವಪಕ್ಷ ನಿಯೋಗದ ನಾಲ್ಕು ರಾಷ್ಟ್ರಗಳ ವಿಶಾಲ ರಾಜತಾಂತ್ರಿಕ ಸಂಪರ್ಕದ ಮೊದಲ ನಿಲ್ದಾಣ ಯುಎಇ.
ನಿಯೋಗವು ಸಹಿಷ್ಣುತೆ ಮತ್ತು ಸಹಬಾಳ್ವೆ ಸಚಿವ ಶೇಖ್ ನಹ್ಯಾನ್ ಮಬಾರಕ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಅಲ್ ನಹ್ಯಾನ್ ತಮ್ಮ ತೀವ್ರ ಸಂತಾಪ ಸೂಚಿಸಿದರು. ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ಪಾಕಿಸ್ತಾನದ ಪ್ರಯತ್ನಗಳನ್ನು ನಿಯೋಗವು ತೋರಿಸಿದೆ.
#WATCH | Abu Dhabi, UAE: BJP MP Bansuri Swaraj says, " Sindoor is now a synonym for justice and power. I salute our Armed Forces for this. I also appreciate the leadership of PM Modi…" pic.twitter.com/4wIAXF4M4b
— ANI (@ANI) May 22, 2025