ಹಾಸನ : ಯುವಜನತೆಯಲ್ಲಿ ಹೃದಯಾಘಾತ ಹೆಚ್ಚುತ್ತಿದ್ದು, ಬಾತ್ ರೂಂನಲ್ಲೇ ಕುಸಿದುಬಿದ್ದು ಯುವತಿ ಸಾವನ್ನಪ್ಪಿದ ಘಟನೆ ಹಾಸನದಲ್ಲಿ ನಡೆದಿದೆ.
ಹೃದಯಾಘಾತದಿಂದ ಯುವತಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಮೃತಳನ್ನು ಸಂಧ್ಯಾ (19) ಎಂದು ಗುರುತಿಸಲಾಗಿದೆ.
ಮಡಿವಾಳ ಬಡಾವಣೆ ನಿವಾಸಿಯಾದ ವೆಂಕಟೇಶ್ ಹಾಗೂ ಪೂರ್ಣಿಮ ದಂಪತಿ ಪುತ್ರಿ ಸಂಧ್ಯಾ ಮೃತಪಟ್ಟಿದ್ದಾಳೆ. ಈಕೆ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ಬಾತ್ ರೂಂಗೆ ತೆರಳಿದ ವೇಳೆ ಕುಸಿದು ಬಿದ್ದಿದ್ದಾಳೆ. ತುಂಬಾ ಹೊತ್ತಾದರೂ ಮಗಳು ಬಾತ್ ರೂಂನಿಂದ ಬಾರದ ಹಿನ್ನೆಲೆ ಆತಂಕಗೊಂಡ ಪೋಷಕರು ಬಾಗಿಲು ಒಡೆದಿದ್ದಾರೆ. ಯುವತಿ ಕುಸಿದು ಬಿದ್ದಿರುವುದನ್ನು ನೋಡಿದ ಪೋಷಕರು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ, ಆದರೆ ಅಷ್ಟರಲ್ಲೇ ಯುವತಿ ಮೃತಪಟ್ಟಿದ್ದಾಳೆ.
TAGGED:ಯುವತಿ ಸಾವು