ಬೆಂಗಳೂರು : ಬೆಂಗಳೂರಿನಲ್ಲಿ ಗನ್ ಹಿಡಿದು ಪಬ್ ಗೆ ನುಗ್ಗಿದ್ದ ಆರೋಪಿ ಕೊನೆಗೂ ಅರೆಸ್ಟ್ ಆಗಿದ್ದಾನೆ.
ಒಡಿಶಾ ಮೂಲದ ದಿಲೀಪ್ ಕುಮಾರ್ ಎಂಬಾತ ಈ ಕೃತ್ಯ ಎಸಗಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ದಿಲೀಪ್ ಕುಮಾರ್ ಬಳಿ ಯಾವುದೇ ಗನ್ ಪತ್ತೆಯಾಗಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ತಂಗಿ ಮದುವೆ ಮಾಡಲು ಹಣ ಹೊಂದಿಸಲು ದಿಲೀಪ್ ಕುಮಾರ್ ದರೋಡೆಗೆ ಸ್ಕೆಚ್ ಹಾಕಿದ್ದನು. ಬೆಂಗಳೂರಿನ ರಾಜಾಜಿನಗರದಲ್ಲಿರುವ ಜಾಮೆಟ್ರಿ ಪಬ್ ನಲ್ಲಿ ಕಳ್ಳತನ ನಡೆದಿತ್ತು, ಕ್ಯಾಷ್ ಕೌಂಟರ್ ಒಡೆದು ಹಣ ದೋಚಿ ಕಳ್ಳ ಪರಾಯಾಗಿದ್ದನು. ಕಳ್ಳ ಕ್ಯಾಷ್ ಕೌಂಟರ್ ಒಡೆದು ಹಣ ದೋಚಿ ಎಸ್ಕೇಪ್ ಆಗಿದ್ದನು.
ಬ್ಯಾಕ್ ಗೇಟ್ ನಿಂದ ಕಳ್ಳ ಪಬ್ ಗೆ ಎಂಟ್ರಿ ಕೊಟ್ಟಿದ್ದಾನೆ. ಎಲ್ಲಾ ಸಿಸಿಟಿವಿ, ಲೈಟ್ ಗಳನ್ನು ಆಫ್ ಮಾಡಿ ಕಳ್ಳತನ ಮಾಡಿದ್ದಾನೆ. ಪೊಲೀಸರು ಜಾಮೆಟ್ರಿ ಪಬ್ ನಲ್ಲಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಶೋಧ ನಡೆಸಿದ್ದರು.
You Might Also Like
TAGGED:ಪಬ್