ಮೈಸೂರು: ಸಿಲಿಂಡರ್ ಬದಲಾಯಿಸುವಾಗ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರಿನಲ್ಲಿ ನಡೆದಿತ್ತು. ಐವರ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೇ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕುಲ್ಕುಣಿಕೆಯ ಕುರ್ಜನ್ ಬೀದಿಯಲ್ಲಿ ನಿಂಗರಾಜು ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ನಿಂಗರಾಜು ಪತ್ನಿ ಜ್ಯೋತಿ, ಪಕ್ಕದ ಮನೆಯ ರಾಣಿಯಮ್ಮ, ಶೀಲ, ನಾಗಮ್ಮ ಸೇರಿದಂತೆ ಐವರು ಗಾಯಗೊಂಡಿದ್ದರು. ಈ ಪೈಕಿ ಜ್ಯೋತಿ (38) ನಾಗಮ್ಮ (55) ಮೃತಪಟ್ಟಿದ್ದಾರೆ.
ಸಿಲಿಂಡರ್ ಬದಲಿಸುವಾಗ ಜೋರಾದ ಶಬ್ಧ ಬಂದಿದ್ದು, ಅಕ್ಕ-ಪಕ್ಕದ ಮನೆಯವರು ಓಡಿ ಬಂದು ನೋಡಲು ಹೋಗಿದ್ದಾರೆ. ಈ ವೇಳೆ ಬೆಂಕಿ ಅವರ ಬಟ್ಟೆಗೆ ಹೊತ್ತಿಕೊಂಡಿದೆ. ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
You Might Also Like
TAGGED:ಗ್ಯಾಸ್ ಸಿಲಿಂಡರ್ ಸ್ಪೋಟ