ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆಗೆ ಡಿಸೆಂಬರ್ 24ರ ವರೆಗಿನ ಸೇವಾ ಅಂಕ ಪರಿಗಣಿಸಲಾಗುವುದು.
ಪ್ರಸಕ್ತ ಸಾಲಿನ ಸರ್ಕಾರಿ ಶಾಲೆ ಶಿಕ್ಷಕರ ಸಾಮಾನ್ಯ ವರ್ಗಾವಣೆ ಎಲ್ಲಾ ಪ್ರಕ್ರಿಯೆಗಳಿಗೂ ಶಿಕ್ಷಕರ ಡಿಸೆಂಬರ್ 2024ರ ಅಂತ್ಯದವರೆಗಿನ ಸೇವಾ ವಿವರದ ಆಧಾರದಲ್ಲಿ ಸಲ್ಲಿಸಿರುವ ವೇಯ್ಟೇಜ್ ಅಂಕ(ಸೇವಾ ಅಂಕ)ಗಳನ್ನು ಪರಿಗಣಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
2025 -26 ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪೂರ್ವಭಾವಿ ಪ್ರಕ್ರಿಯೆಯನ್ನು ಶಿಕ್ಷಣ ಇಲಾಖೆ ಆರಂಭಿಸಿದೆ. ಶಿಕ್ಷಕರು ಸೇವಾ ಅಂಕಗಳನ್ನು EEDS ತಂತ್ರಾಂಶದಲ್ಲಿ ಸಲ್ಲಿಸಲು ಅನೇಕ ಬಾರಿ ಅವಕಾಶ ನೀಡಲಾಗಿತ್ತು. ಇದಕ್ಕೆ ಮಾರ್ಚ್ 29 ಕೊನೆಯ ದಿನವಾಗಿತ್ತು. ಅದುವರೆಗೆ ಸಲ್ಲಿಸಿರುವ ಸೇವಾ ಅಂಕಗಳನ್ನು ಮಾತ್ರ ವರ್ಗಾವಣೆಗೆ ಪರಿಗಣಿಸಲಾಗುವುದು. ಮತ್ತೆ ಅವಕಾಶ ವಿಸ್ತರಿಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
