ಮಹಾರಾಷ್ಟ್ರದಲ್ಲಿ ಕೋವಿಡ್ ಚೇತರಿಕೆ; ಆದರೂ ಎರಡು ಸಾವು: ಮುಂಬೈನಲ್ಲಿ ಸಕ್ರಿಯ ಪ್ರಕರಣಗಳ ಹೆಚ್ಚಳ

ಮಹಾರಾಷ್ಟ್ರದಲ್ಲಿ ಈ ವರ್ಷದ ಜನವರಿಯಿಂದ ಇದುವರೆಗೆ ಎರಡು ಕೋವಿಡ್-19 ಸಂಬಂಧಿತ ಸಾವುಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಂಗಳವಾರ ತಿಳಿಸಿದೆ. ಮೃತಪಟ್ಟ ಇಬ್ಬರೂ ಮುಂಬೈನವರಾಗಿದ್ದು, ಅವರಿಗೆ ಇತರ ಆರೋಗ್ಯ ಸಮಸ್ಯೆಗಳಿದ್ದವು (ಸಹ-ಅಸ್ವಸ್ಥತೆಗಳು) ಎಂದು ಇಲಾಖೆಯ ಪ್ರಕಟಣೆ ಸ್ಪಷ್ಟಪಡಿಸಿದೆ.

ಮೃತಪಟ್ಟವರಲ್ಲಿ ಒಬ್ಬರು ನೆಫ್ರೋಟಿಕ್ ಸಿಂಡ್ರೋಮ್ ಜೊತೆಗೆ ಹೈಪೋಕಾಲ್ಸೆಮಿಯಾ ಸೆಳವು ಸಮಸ್ಯೆಯಿಂದ ಬಳಲುತ್ತಿದ್ದರೆ, ಮತ್ತೊಬ್ಬರು ಕ್ಯಾನ್ಸರ್ ರೋಗಿಯಾಗಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜನವರಿಯಿಂದ ಇಲ್ಲಿಯವರೆಗೆ ಒಟ್ಟು 6,066 ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ 106 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 101 ಪ್ರಕರಣಗಳು ಮುಂಬೈನಲ್ಲೇ ದಾಖಲಾಗಿದ್ದು, ಉಳಿದವು ಪುಣೆ, ಥಾಣೆ ಮತ್ತು ಕೊಲ್ಲಾಪುರದಿಂದ ವರದಿಯಾಗಿವೆ. ಪ್ರಸ್ತುತ, 52 ರೋಗಿಗಳು ಸೌಮ್ಯ ರೋಗಲಕ್ಷಣಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದರೆ, 16 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.

“ಕೋವಿಡ್-19 ಪ್ರಕರಣಗಳ ಹೆಚ್ಚಳ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ, ಇತರ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲೂ ಕಂಡುಬರುತ್ತಿದೆ” ಎಂದು ಪ್ರಕಟಣೆ ತಿಳಿಸಿದೆ. ಸದ್ಯ ಮುಂಬೈನಲ್ಲಿ 101 ಸಕ್ರಿಯ ಪ್ರಕರಣಗಳಿವೆ. ಸೌಮ್ಯ ರೋಗಲಕ್ಷಣಗಳೊಂದಿಗೆ ಚಿಕಿತ್ಸೆ ಪಡೆಯುತ್ತಿರುವ 52 ರೋಗಿಗಳಲ್ಲಿ, 16 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ILI (ಇನ್ಫ್ಲುಯೆಂಜಾ ತರಹದ ಕಾಯಿಲೆ) ಮತ್ತು SARI (ತೀವ್ರ ಉಸಿರಾಟದ ಸೋಂಕು) ಸಮೀಕ್ಷೆಗಳ ಮೂಲಕ ದೈನಂದಿನ ಪರೀಕ್ಷೆಗಳು ನಡೆಯುತ್ತಿವೆ. ಪುಣೆಯಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ನಡೆಸಲಾಗುತ್ತಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.




Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read