ʼಬ್ರೇಕಪ್ʼ ನಂತರ ಯುವತಿ ಸ್ನೇಹಕ್ಕೆ ಯತ್ನಿಸಿದ ಯುವಕನ ದುರಂತ ಅಂತ್ಯ : ಮಾಜಿ ಪ್ರಿಯಕರನಿಂದ ಕೊಲೆ !

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬ್ರೇಕಪ್ ನಂತರ ಯುವತಿಯೊಬ್ಬರೊಂದಿಗೆ ಸ್ನೇಹ ಬೆಳೆಸಲು ಯತ್ನಿಸಿದ 23 ವರ್ಷದ ಯುವಕನೊಬ್ಬ ಕೊಲೆಯಾಗಿದ್ದಾನೆ. ಮೇ 14 ರಂದು ಭೋಪಾಲ್‌ನ ಗೌತಮ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶಿವಂ ಕಲಾಂ ಎಂದು ಗುರುತಿಸಲಾದ ಯುವಕನನ್ನು ಯುವತಿಯ ಮಾಜಿ ಪ್ರಿಯಕರ ಚೂಪಾದ ಆಯುಧದಿಂದ ಹಲ್ಲೆ ಮಾಡಿದ್ದಾನೆ. ಸಿಟಿ ಮಲ್ಟಿ ಆಸ್ಪತ್ರೆಯ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ನಗರದಲ್ಲಿ ಆತಂಕ ಮೂಡಿಸಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಶಿವಂನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಅವರನ್ನು ಏಮ್ಸ್‌ಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ.

ʼಇಂಡಿಯಾ ಟುಡೇʼ ವರದಿಯ ಪ್ರಕಾರ, ಯುವತಿ ಇತ್ತೀಚೆಗಷ್ಟೇ ತನ್ನ ಮೊದಲ ಸಂಬಂಧವನ್ನು ಮುರಿದುಕೊಂಡಿದ್ದಳು ಮತ್ತು ಸಂತ್ರಸ್ತ ಯುವಕ ಆಕೆಯ ಬಗ್ಗೆ ಆಸಕ್ತಿ ತೋರಿಸಿದ್ದ. ಇದೇ ಮಾರಣಾಂತಿಕ ಘರ್ಷಣೆಗೆ ಮೂಲ ಕಾರಣ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ.

ಗೋವಿಂದಪುರ ಪೊಲೀಸ್ ಠಾಣೆಯ ಉಸ್ತುವಾರಿ ಅವಧೇಶ್ ಸಿಂಗ್ ತೋಮರ್ ಅವರು ಆಜ್ ತಕ್‌ಗೆ ನೀಡಿದ ಹೇಳಿಕೆಯಲ್ಲಿ ಘಟನೆಯ ಸರಣಿಯನ್ನು ಖಚಿತಪಡಿಸಿದ್ದಾರೆ. ತನಿಖೆಯಿಂದ ತಿಳಿದುಬಂದಿರುವ ಪ್ರಕಾರ, ಇತ್ತೀಚೆಗೆ ತನ್ನ ಗೆಳೆಯ ಶಿವ ರಜಪೂತ್‌ನೊಂದಿಗೆ ಜಗಳವಾಡಿಕೊಂಡು ಬ್ರೇಕಪ್ ಮಾಡಿಕೊಂಡಿದ್ದ ಯುವತಿಯ ಸುತ್ತ ಈ ಇಡೀ ಪ್ರಕರಣ ಸುತ್ತುತ್ತದೆ ಎಂದು ಅವರು ಹೇಳಿದ್ದಾರೆ.

ಘಟನೆ ನಡೆದ ದಿನ ಏನಾಯಿತು ?

ಆಕೆ ಸಂತ್ರಸ್ತ ಯುವಕನ ಸಹೋದರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಶಿವಂ ನಿಯಮಿತವಾಗಿ ಆ ಮನೆಗೆ ಭೇಟಿ ನೀಡುತ್ತಿದ್ದ ಕಾರಣ, ಶಿವನೊಂದಿಗೆ ಆಕೆಯ ಬ್ರೇಕಪ್ ಬಗ್ಗೆ ತಿಳಿದ ನಂತರ ಆಕೆಯ ಬಗ್ಗೆ ವೈಯಕ್ತಿಕ ಆಸಕ್ತಿ ಬೆಳೆಸಿಕೊಂಡಿದ್ದ. ಇತ್ತೀಚಿನ ವಾರಗಳಲ್ಲಿ ಇಬ್ಬರೂ ಪರಸ್ಪರ ಸ್ನೇಹಿತರ ಮೂಲಕ ಕೆಲವು ಬಾರಿ ಭೇಟಿಯಾಗಿದ್ದರು ಎನ್ನಲಾಗಿದೆ.

ಘಟನೆ ನಡೆದ ದಿನ ಶಿವ ರಜಪೂತ್ ತನ್ನ ಸ್ನೇಹಿತ ಮಹಿ ಜೊತೆ ಯುವತಿಯ ಮನೆಗೆ ಭೇಟಿ ನೀಡಿದಾಗ ಘರ್ಷಣೆ ಸಂಭವಿಸಿದೆ. ಸಂತ್ರಸ್ತ ಯುವಕ, ಯುವತಿಯೊಂದಿಗೆ ಬೆರೆಯುತ್ತಿರುವುದನ್ನು ನೋಡಿದಾಗ ಇಬ್ಬರ ನಡುವೆ ವಾಗ್ವಾದ ನಡೆಯಿತು. ಆದರೆ, ಪರಿಸ್ಥಿತಿ ತೀವ್ರವಾಗಿ ಉಲ್ಬಣಗೊಂಡು ಶಿವ ರಜಪೂತ್ ಹಿಂಸಾತ್ಮಕವಾಗಿ ಶಿವಂ ಮೇಲೆ ಹಲ್ಲೆ ಮಾಡಿದ ಎಂದು ವರದಿ ತಿಳಿಸಿದೆ.

ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಶಿವ ರಜಪೂತ್‌ನನ್ನು ಬಂಧಿಸಿದ್ದಾರೆ. ಆತನ ಸಹಚರನೆಂದು ಹೇಳಲಾದ ಮಹಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆತನನ್ನು ಹಿಡಿಯಲು ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದು, ಆತನ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಸಾರ್ವಜನಿಕರು ಮುಂದೆ ಬರುವಂತೆ ಮನವಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read