ಹಾವೇರಿ: ಹಾವೇರಿ ಜಿಲ್ಲೆಯ ಸವಣೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗೆ ಪ್ರವೇಶ ನೀಡಲು 10,000 ರೂ. ಲಂಚ ಪಡೆದ ಆರೋಪದ ಮೇಲೆ ಮುಖ್ಯ ಶಿಕ್ಷಕನನ್ನು ಬಂಧಿಸಲಾಗಿದೆ.
ಸವಣೂರಿನ ಖಾದರ್ ಭಾಗ್ ಓಣಿ ನಿವಾಸಿ ಅಕ್ಬರ್ ಅವರ ಪುತ್ರನ ಕೆಪಿಎಸ್ ಶಾಲಾ ಪ್ರವೇಶಕ್ಕೆ 50,000 ರೂ. ಲಂಚ ನೀಡುವಂತೆ ಮುಖ್ಯ ಶಿಕ್ಷಕ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿ ಬೇಡಿಕೆ ಇಟ್ಟಿದ್ದರು. ಹಣ ಇಲ್ಲವೆಂದು ಹೇಳಿದಾಗ 10,000 ರೂ. ಕೊಡುವಂತೆ ಬಲವಂತ ಮಾಡಿದ್ದರು.
ಮನೆಗೆ ಕರೆಸಿಕೊಂಡು ಮಂಗಡವಾಗಿ 5000 ರೂ. ಪಡೆದುಕೊಂಡಿದ್ದರು. ಲಂಚ ಕೇಳಿದ ಕುರಿತಾಗಿ ಅಕ್ಬರ್ ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮೇ 17ರಂದು ಸವಣೂರಿನ ಹಾವಣಗಿ ಪ್ಲಾಟ್ ನಲ್ಲಿರುವ ಮುಖ್ಯ ಶಿಕ್ಷಕ ಮಂಜುನಾಥ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಮುಖ್ಯ ಶಿಕ್ಷಕ ಮಂಜುನಾಥ ಲಂಚ ಪಡೆಯುತ್ತಿದ್ದ ವೇಳೆಯಲ್ಲೇ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.