ಮುಂಬೈ: ಅನಧಿಕೃತ ಕಟ್ಟಡ ನಿರ್ಮಾಣ ಮಾಡಿದ್ದಕ್ಕಾಗಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ನಟ-ರಾಜಕಾರಣಿ ಮಿಥುನ್ ಚಕ್ರವರ್ತಿ ಅವರಿಗೆ ಬಿಎಂಸಿ ಶೋ-ಕಾಸ್ ನೋಟಿಸ್ ಜಾರಿ ಮಾಡಿದೆ
ತಮ್ಮ ಮಲಾಡ್ ಆವರಣದಲ್ಲಿ ನೆಲ ಮತ್ತು ಮೆಜ್ಜನೈನ್ ಮಹಡಿಗಳ ಅನಧಿಕೃತ ನಿರ್ಮಾಣದ ಆರೋಪದ ಮೇಲೆ ಶೋ-ಕಾಸ್ ನೋಟಿಸ್ ಕಳುಹಿಸಿದೆ. ಮೆಜ್ಜನೈನ್ ಮಹಡಿ ಭಾಗಶಃ ಮಹಡಿಯಾಗಿದ್ದು, ಇದನ್ನು ಸಾಮಾನ್ಯವಾಗಿ ಎರಡು ಮಹಡಿಗಳ ನಡುವೆ ನಿರ್ಮಿಸಲಾಗುತ್ತದೆ.
ಪ್ರತಿಕ್ರಿಯೆ ನೀಡಿರುವ ಮಿಥುನ್ ಚಕ್ರವರ್ತಿ, ತಮ್ಮ ಆವರಣ ಇರುವ ಮಲಾಡ್‌ನ ಎರಂಗಲ್‌ನಲ್ಲಿ ನಡೆಯುತ್ತಿರುವ ಬಿಎಂಸಿ ಡ್ರೈವ್‌ನ ಭಾಗವಾಗಿ ನೋಟಿಸ್ ಸ್ವೀಕರಿಸಿರುವುದಾಗಿ ಹೇಳಿಕೊಂಡಿದ್ದಾರೆ. ‘ನಾನು ಯಾವುದೇ ಅಕ್ರಮ ಅಥವಾ ಅನಧಿಕೃತ ನಿರ್ಮಾಣ ಮಾಡಿಲ್ಲ. ಎಲ್ಲರಿಗೂ ನೋಟಿಸ್ ಕಳುಹಿಸಲಾಗಿದೆ, ನಾವು ಅವರಿಗೆ ಪ್ರತಿಕ್ರಿಯಿಸುತ್ತಿದ್ದೇವೆ ಎಂದು ಅಹೇಳಿದ್ದಾರೆ.
ಮೇ 10 ರಂದು ನೀಡಲಾದ ಶೋಕಾಸ್ ನೋಟಿಸ್ ಪ್ರಕಾರ, ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅನಧಿಕೃತ ನಿರ್ಮಾಣಕ್ಕಾಗಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಸೆಕ್ಷನ್ 475 ಎ ಅಡಿಯಲ್ಲಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದೆ. ಯಾವುದೇ ಅನಧಿಕೃತ ನಿರ್ಮಾಣವನ್ನು ತೆಗೆದುಹಾಕಲು ವಿಫಲವಾದರೆ ಸೆಕ್ಷನ್ 475 ಎ ದಂಡವನ್ನು ವಿಧಿಸುವುದಾಗಿ ಹೇಳಲಾಗಿದೆ.
ನೋಟಿಸ್‌ನಲ್ಲಿ ಮೆಜ್ಜನೈನ್ ಮಟ್ಟವಿರುವ ಎರಡು ನೆಲಮಹಡಿ ಘಟಕಗಳು ಮತ್ತು ಮೂರು ತಾತ್ಕಾಲಿಕ 10×10 ಘಟಕಗಳನ್ನು ಉಲ್ಲೇಖಿಸಲಾಗಿದೆ, ಇವುಗಳನ್ನು ಇಟ್ಟಿಗೆ ಕಲ್ಲಿನ ಗೋಡೆಗಳು, ಮರದ ಹಲಗೆಗಳು, ಗಾಜಿನ ವಿಭಾಗಗಳು ಮತ್ತು ಎಸಿ ಶೀಟ್ ಸೀಲಿಂಗ್‌ಗಳ ಸಂಯೋಜನೆಯನ್ನು ಬಳಸಿ ನಿರ್ಮಿಸಲಾಗಿದೆ. ನೋಟಿಸ್ ಪ್ರಕಾರ, ಈ ನಿರ್ಮಾಣಗಳನ್ನು ಅನುಮತಿಯಿಲ್ಲದೆ ಕೈಗೊಳ್ಳಲಾಗಿದೆ. ನೋಟಿಸ್‌ನಲ್ಲಿ, ನಾಗರಿಕ ಸಂಸ್ಥೆಯು ನಟನಿಗೆ ಸದರಿ ಕಟ್ಟಡ ಅಥವಾ ಕೆಲಸವನ್ನು ಏಕೆ ತೆಗೆದುಹಾಕಬಾರದು ಅಥವಾ ಬದಲಾಯಿಸಬಾರದು ಅಥವಾ ಕೆಡವಬಾರದು ಅಥವಾ ಆವರಣದ ಬಳಕೆಯನ್ನು ಏಕೆ ಪುನಃಸ್ಥಾಪಿಸಬಾರದು ಎಂಬುದಕ್ಕೆ ಪ್ರತಿಕ್ರಿಯಿಸಲು ಒಂದು ವಾರದ ಸಮಯವನ್ನು ನೀಡಿತ್ತು.