ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಹೋಟೆಲ್ ವೊಂದರಲ್ಲಿ ಕನ್ನಡಿಗರಿಗೆ ಅವಮಾನ ಮಾಡಲಾಗಿದ್ದು, ಹೋಟೆಲ್ ಡಿಸ್ ಪ್ಲೇನಲ್ಲಿ ಆಕ್ಷೇಪಾರ್ಹ ಬರಹ ಪ್ರಕಟಿಸಿರುವ ಘಟನೆ ನಡೆದಿದೆ.
ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ ಜಿಎಸ್ ಸೂಟ್ಸ್ ಹೋಟೆಲ್ ನಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯವಗೈ ಡಿಸ್ ಪ್ಲೇನಲ್ಲಿ ಪ್ರದರ್ಶಿಸಲಾಗಿದೆ. ನಿನ್ನೆ ರಾತ್ರಿ ಹೋಟೆಲ್ ನ ಡಿಸ್ ಪ್ಲೇ ಬೋರ್ಡ್ ನಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಬರಹ ಹಾಕಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಹೋಟೆಲ್ ಗೆ ಮಡಿವಾಳ ಠಾಣೆ ಇನ್ಸ್ ಪೆಕ್ಟರ್ ಭೇಟಿ ನೀಡಿದ್ದಾರೆ.
ಹೋಟೆಲ್ ಮ್ಯಾನೇಜರ್, ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಡಿಸ್ ಪ್ಲೇ ಬೋರ್ಡ್ ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಈ ಹೋಟೆಲ್ ನೌಶಾದ್ ಎಂಬುವವರ ಮಾಲಿಕತ್ವದ ಹೋಟೆಲ್ ಆಗಿದ್ದು, ಸದ್ಯ ನೌಶಾದ್ ಕೇರಳದಲ್ಲಿದ್ದಾರೆ. ಘಟನೆ ಬೆನ್ನಲ್ಲೇ ಹೋಟೆಲ್ ಎಲ್ ಇಡಿ ಬೋರ್ಡ್ ಹ್ಯಾಕ್ ಆಗಿದೆ ಎಂದು ಹೋಟೆಲ್ ಮಾಲೀಕ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.