ಕುಟುಂಬದೊಳಗಿನ ದ್ವೇಷಕ್ಕೆ ಬಲಿಯಾದ ವ್ಯಕ್ತಿ: ವಿಡಿಯೊ ವೈರಲ್ ನಂತರ ಬಯಲಾಯ್ತು ಕೊಲೆ ರಹಸ್ಯ….!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಮತ್ತು ಇಬ್ಬರು ಪುತ್ರರು ಸೇರಿ ಬರ್ಬರವಾಗಿ ಥಳಿಸಿ ಕೊಂದ ನಂತರ ಆತನ ದೇಹವನ್ನು ಗಂಗಾ ನದಿಯಲ್ಲಿ ಎಸೆದಿದ್ದಾರೆ. 58 ವರ್ಷದ ದಿನೇಶ್ ಕುಮಾರ್ ಮೌರ್ಯ ಎಂಬಾತನನ್ನು ಕೆರಾನಿ ಪ್ರದೇಶದ ತಾರಾ ಮೊಹಲ್ಲಾದಲ್ಲಿರುವ ಅವರ ಮನೆಯ ಅಂಗಳದಲ್ಲಿ ಬುಧವಾರ ಮಧ್ಯಾಹ್ನ ಬೇವಿನ ಮರಕ್ಕೆ ಕಟ್ಟಿಹಾಕಿ ನಿರ್ದಯವಾಗಿ ಥಳಿಸಲಾಗಿತ್ತು.

ಪೊಲೀಸರ ವಿಳಂಬಿತ ಪ್ರತಿಕ್ರಿಯೆ ಮತ್ತು ಕುಟುಂಬದವರು ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿ ಮುಚ್ಚಿಹಾಕಲು ಪ್ರಯತ್ನಿಸಿದರೂ, ಹಲ್ಲೆಯ ವಿಡಿಯೊ ವೈರಲ್ ಆದ ನಂತರ ಅಧಿಕಾರಿಗಳು ಕ್ರಮ ಕೈಗೊಳ್ಳುವಂತಾಯಿತು. ಪೊಲೀಸರು ಗುರುವಾರ ಸಂಜೆ ದಿನೇಶ್ ಅವರ ದೇಹವನ್ನು ದೇಂಗುರ್‌ಪುರ ಘಾಟ್‌ನಿಂದ ವಶಪಡಿಸಿಕೊಂಡು ಅವರ ಪತ್ನಿ ಸೋನಾ ದೇವಿ ಮತ್ತು ಇಬ್ಬರು ಪುತ್ರರನ್ನು ಬಂಧಿಸಿದ್ದಾರೆ.

ದಿನೇಶ್ ಡ್ರಗ್ಸ್ ವ್ಯಸನಿಯಾಗಿದ್ದು, ಈ ಹಿಂದೆ ತಲೆಗೆ ಬಿದ್ದ ಗಾಯದಿಂದ ಸಾವನ್ನಪ್ಪಿದ್ದಾನೆ ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ. ಆದರೆ ವಿಡಿಯೊದಲ್ಲಿ ಸೆರೆಯಾದ ಭೀಕರ ಥಳಿತವು ಕರಾಳ ಸತ್ಯವನ್ನು ಬಹಿರಂಗಪಡಿಸಿದೆ. ತನಿಖೆ ಮುಂದುವರೆದಿದ್ದು, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read