ಬೆಂಗಳೂರು : ಕೌಟುಂಬಿಕ ಕಲಹ ವಿಚಾರಕ್ಕೆ ಉಳಿಯಿಂದ ಚುಚ್ಚಿ 2 ನೇ ಪತ್ನಿಯ ಹತ್ಯೆಗೈದು ಪತಿಯೋರ್ವ ಪೊಲೀಸರಿಗೆ ಶರಣಾಗಿದ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ
ಬಾಣಸವಾಡಿಯ ಬಚ್ಚಪ್ಪ ಲೇಔಟ್ ನ ಕಲೈವಾಣಿ (47) ಮೃತ ದುರ್ದೈವಿ. ರಮೇಶ್ (50) ಎಂಬಾತ ಕೊಲೆ ಮಾಡಿದ ಆರೋಪಿ ಸದ್ಯ ಜೈಲು ಸೇರಿದ್ದಾನೆ.
ಕಲೈವಾಣಿಯ ಮೊದಲ ಪತಿ ಹಾಗೂ ರಮೇಶ್ ನ ಮೊದಲ ಪತ್ನಿ ಮೃತಪಟ್ಟಿದ್ದರು. ಹೀಗಾಗಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 9 ವರ್ಷದ ಮಗಬಿದ್ದು, ರಮೇಶ್ ಮರಗೆಲಸ ಮಾಡುತ್ತಿದ್ದರು.
ಆಗಾದ ದಂಪತಿ ನಡುವೆ ಜಗಳ ನಡೆಯುತ್ತುತ್ತು ಎನ್ನಲಾಗಿದೆ. ಒಂದು ದಿನ ಕಲೈವಾಣೀ ರಮೇಶ್ ಮೊದಲ ಪತ್ನಿಯ ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ರೊಚ್ಚಿಗೆದ್ದ ರಮೇಶ್ ಉಳಿಯಿಂದ ಕಲೈವಾಣಿಯನ್ನು ಮನಬಂದಂತೆ ಚುಚ್ಚಿ ಹತ್ಯೆ ಮಾಡಿದ್ದಾನೆ. ನಂತರ ಆತನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
You Might Also Like
TAGGED:ಮರ್ಡರ್