ನವದೆಹಲಿ: ಭಾರತದ ಮತ್ತೊಂದು ಕ್ಷಿಪಣಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅಂಡಮಾನ್ ಮತ್ತು ನಿಕೋಬಾರ್ ಬಳಿ ನೋಟಮ್ ಜಾರಿಗೊಳಿಸಲಾಗಿದೆ.
ಅಂಡಮಾನ್ ದ್ವೀಪ ಸಮೂಹದ 500 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನೋ ಫ್ಲೈಯಿಂಗ್ ಜೋನ್ ಜಾರಿಗೊಳಿಸಲಾಗಿದೆ. ಮೇ 23 ಮತ್ತು 24ರಂದು ಕ್ಷಿಪಣಿ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ನೋಟಮ್ ಜಾರಿ ಮಾಡಲಾಗಿದೆ.
ಕ್ಷಿಪಣಿ ಪರೀಕ್ಷೆ ನಡೆಸಲಿರುವ ಹಿನ್ನೆಲಯಲ್ಲಿ ವಿಮಾನಯಾನ ಇಲಾಖೆ ಅಂಡಮಾನ್ ನಿಕೋಬಾರ್ ದ್ವೀಪದ ಬಳಿ ಮೇ 23, 24ರಂದು ನೋಟಮ್ ಜಾರಿ ಮಾಡಿದೆ. ಮೇ 23-24 ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಂಭಾವ್ಯ ಕ್ಷಿಪಣಿ ಪರೀಕ್ಷೆಗೆ ಭಾರತವು NOTAM ಎಚ್ಚರಿಕೆ ನೀಡಿದೆ ಎನ್ನಲಾಗಿದೆ.