ಹೈದರಾಬಾದ್: ವ್ಯಕ್ತಿಯೋರ್ವ ತನ್ನ 14 ದಿನಗಳ ಹೆಣ್ಣುಮಗುವನ್ನು ಕೊಂದು ಕಸದ ತೊಟ್ಟಿಗೆ ಬಿಸಾಕಿರುವ ಘೋರ ಘಟನೆ ಹೈದರಾಬಾದ್ ನಲಿ ನಡೆದಿದೆ.
ನೇಪಾಳ ಮೂಲದ ಜಗತ್ ಎಂಬಾತ ತನ್ನ ಮಗುವನ್ನು ಹತ್ಯೆಗೈದು ಕಸದ ತೊಟ್ಟಿಗೆ ಎಸೆದಿದ್ದಾನೆ. ಗೋಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಜಗತ್ ನನ್ನು ಆತನ ಪತ್ನಿ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಜಗತ್ ಹಾಗೂ ಕುಟುಂಬ ಒಂದು ವರ್ಷದಿಂದ ಅಪಾರ್ತ್ ಮೆಂಟ್ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಚಾಕುವಿನಿಂದ ಇರಿದು ತನ್ನ ಮಗುವನ್ನು ಕೊಂದು ತೊಟ್ತಿಗೆ ಎಸೆದಿದ್ದಾನೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.