BIG NEWS: ಮಹಿಳಾ ಕಾನ್ಸ್ ಟೇಬಲ್ ಗೆ ವಶೀಕರಣ, ವಂಚನೆ ಪ್ರಕರಣ: ಜ್ಯೋತಿಷಿ ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಮಹಿಳಾ ಕಾನ್ಸ್ಟೇಬಲ್ ಓರ್ವರಿಗೆ ಜ್ಯೋತಿಷಿ ಎಂದು ಹೇಳಿಕೊಂಡು ವ್ಯಕ್ತಿಯೋರ್ವ ವಶೀಕರಣ, ವಂಚನೆ ಮಾಡಿರುವ ಘಟನೆ ನಡೆದಿದೆ.

ಪ್ರಕರಣ ಸಂಬಂಧ ಆಡುಗೋಡಿ ಪೊಲೀಸರು ಕಲಬುರಗಿಯ ಜ್ಯೋತಿಷಿ ಹೇಮಂತ್ ಭಟ್ ಎಂಬಾತನನ್ನು ಬಂಧಿಸಿದ್ದಾರೆ. ಪೂಜೆ ನೆಪದಲ್ಲಿ ಮಹಿಲಾ ಕಾನ್ಸ್ ಟೇಬಲ್ ರಿಂದ 5 ಲಕ್ಷ ಹಣ ಪಡೆದು ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ನೊಂದ ಪಿಸಿ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಹಿಳಾ ಪಿಸಿ, ಅನಾರೋಗ್ಯದ ಕಾರಣದಿಂದಾಗಿ ಸ್ನೇಹಿತ ಮೂಲಕ ಜ್ಯೋತಿಷಿ ಮೊರೆ ಹೋಗಿದ್ದರು. ಈ ವೇಳೆ ಆತ್ಮಗಳ ಕಥೆ ಕಟ್ಟಿ ಜ್ಯೋತಿಷಿ ಹೇಮಂತ್ ವಶೀಕರಣ ಮಾಡಿದ್ದಾನೆ. ಕೋರಮಮಂಗಲ ಲಾಡ್ಜ್ ಗೆ ಕರೆಸಿ ಜ್ಯೋತಿಷಿ ಹಣ ಪಡೆದಿದ್ದಾನೆ. ಪೂಜೆಗೆಂದು ಹಂತ ಹಂತವಾಗಿ 5 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದ.

ವಂಚನೆ ಬಗ್ಗೆ ಗೊತ್ತಾಗುತ್ತಿದ್ದಂತೆ ಮಹಿಳೆ ದೂರು ನೀಡಿದ್ದು, ಸದ್ಯ ಆಡುಗೋಡಿ ಪೊಲೀಸರು ಹೇಮಂತ್ ನನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read